ಬೀದರ್: ನಾಲ್ಕು ದಿನ ಸಂಚರಿಸಿದ ಜೆಡಿಎಸ್ ಪಂಚರತ್ನ ಯಾತ್ರೆ - ಬಸವಕಲ್ಯಾಣ ಜೆಡಿಎಸ್ ಅಭ್ಯರ್ಥಿ ಸೈಯದ್ ಯಶ್ರಬ್ ಅಲಿ ಖಾದ್ರಿ
🎬 Watch Now: Feature Video
ಬೀದರ್ : ಜೆಡಿಎಸ್‍ನ 2ನೇ ಹಂತದ ಪಂಚರತ್ನ ರಥಯಾತ್ರೆ ಗಡಿ ಜಿಲ್ಲೆ ಬೀದರ್ನಲ್ಲಿ ಜನವರಿ 5 ರಿಂದ 8 ರವರೆಗೆ ನಾಲ್ಕು ದಿನ ಯಾತ್ರೆ ನಡೆದಿದೆ. ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಉತ್ತರ ಬೀದರ್, ದಕ್ಷಿಣ ಬೀದರ್, ಹುಮನಾಬಾದ್ ಹಾಗೂ ಬಸವಕಲ್ಯಾಣ ಕ್ಷೇತ್ರದಲ್ಲಿ ಯಾತ್ರೆ ಸಂಚರಿಸಿದೆ. ಕೊನೇ ದಿನವಾದ ಭಾನುವಾರ ಕಲ್ಯಾಣ ಕ್ಷೇತ್ರದಲ್ಲಿ ದಿನವಿಡೀ ಸಂಚರಿಸಿ ಯಾತ್ರೆ ಸಮಾಪ್ತಿಗೊಂಡಿತು. ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರಾಜ್ಯ, ದೇಶದ ಪರಿಸ್ಥಿತಿ ಹೇಗಿದೆ ಎಂಬುದನ್ನು ನಾಡಿನ ಜನತೆ ಗಮನಿಸಬೇಕು. ಬಡ ಜನರು, ರೈತರು ಹಾಗೂ ಮಹಿಳೆಯರ ಬೇಕು, ಬೇಡಿಕೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಇವೆಲ್ಲವುಗಳನ್ನು ಪರಿಹರಿಸುವ ಸಲುವಾಗಿಯೇ ಪಂಚ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿ, ಯಾತ್ರೆ ಮಾಡುತ್ತಿದ್ದೇನೆ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ನಾಡಿನ ಒಳಿತಿಗಾಗಿ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂದು ಭರವಸೆ ನೀಡಿದರು. ಶಾಸಕ ಬಂಡೆಪ್ಪ ಕಾಶೆಂಪೂರ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಬಸವಕಲ್ಯಾಣ ಜೆಡಿಎಸ್ ಅಭ್ಯರ್ಥಿ ಸೈಯದ್ ಯಶ್ರಬ್ ಅಲಿ ಖಾದ್ರಿ ಇತರರು ಉಪಸ್ಥಿತರಿದ್ದರು.
Last Updated : Feb 3, 2023, 8:38 PM IST