ಗಣರಾಜ್ಯೋತ್ಸವದಂದೇ 17 ಪಾಕಿಸ್ತಾನಿ ಕೈದಿಗಳ ಬಿಡುಗಡೆ - pakistani prisoners released

🎬 Watch Now: Feature Video

thumbnail

By

Published : Jan 27, 2023, 10:45 PM IST

Updated : Feb 3, 2023, 8:39 PM IST

ಅಮೃತಸರ (ಪಂಜಾಬ್​): 74ನೇ ಗಣರಾಜ್ಯೋತ್ಸವದಂದು ಭಾರತ ಸರ್ಕಾರ ಪಾಕಿಸ್ತಾನದ 17 ಖೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮ ಉದಾರತೆ ತೋರಿದೆ. ಇದರಲ್ಲಿ 12 ಜನ ಪಾಕಿಸ್ತಾನದ ಮೀನುಗಾರರು ಮತ್ತು 5 ಜನ ನಾಗರಿಕ ಕೈದಿಗಳನ್ನು ಬಿಡುಗಡೆ ಮಾಡಿ ತಾಯ್ನಾಡಿಗೆ ಕಳುಹಿಸಿದೆ. 2013ರಲ್ಲಿ ಕರಾಚಿಯಿಂದ ಬಂದಂತಹ 3 ಜನ ಮೀನುಗಾರರು ಗಡಿ ದಾಟಿ ಭಾರತವನ್ನ ಪ್ರವೇಶ ಮಾಡಿ ಮೀನುಗಾರಿಕೆ ಮಾಡುವ ವೇಳೆ ಗುಜರಾತ್​ನಲ್ಲಿ ಬಂಧಿಸಲಾಗಿತ್ತು. 

ಇವರಿಗೆ 10ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿತ್ತು. ಇನ್ನು 2017ರಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರತದ ಗಡಿ ದಾಟಿ ಬಂದಿದ್ದ 9 ಜನ ಪಾಕಿಸ್ತಾನಿ ಮೀನುಗಾರರನ್ನು ಗುಜರಾತ್‌ನ ಕಚ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ಅವರಿಗೆ 6 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಇನ್ನುಳಿದಂತೆ ಐವರು ಭಾರತದ ಗಡಿ ಪ್ರವೇಶಿಸುವಾಗ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದರು. ಇನ್ನು ಎಲ್ಲ ಕೈದಿಗಳ ಶಿಕ್ಷೆ ಪೂರ್ಣಗೊಂಡ ಹಿನ್ನೆಲೆ ಬಿಡುಗಡೆ ಮಾಡಲಾಗಿದೆ.  ಬಿಡುಗಡೆಗೊಂಡ ಕೈದಿಗಳು ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಕಳ್ಳತನ ಮಾಡಲು ಗಣಿಗೆ ಇಳಿದ ನಾಲ್ವರು: ಉಸಿರುಗಟ್ಟಿ ಸಾವು

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.