Watch..ಹೋಳಿ ಸಂಭ್ರಮದಲ್ಲಿ ಭಾಗಿಯಾದ ರಾಣಾ ದಂಪತಿ - ಮೆಲ್ಘಾಟ್ ಪ್ರವಾಸದಲ್ಲಿದ್ದ ರಾಣಾ ದಂಪತಿ
🎬 Watch Now: Feature Video
ಅಮರಾವತಿ : ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಮತ್ತು ಶಾಸಕ ರವಿ ರಾಣಾ ಅವರು ತಮ್ಮ ಕಾರ್ಯಕರ್ತರೊಂದಿಗೆ ಐದು ದಿನಗಳ ಪ್ರವಾಸಕ್ಕೆ ಎಂದು ಮೇಲ್ಘಾಟ್‌ಗೆ ತೆರಳಿದ್ದಾರೆ. ಅಲ್ಲಿ ಹೋಳಿ ಹಬ್ಬವನ್ನು ಪ್ರದೇಶದ ಆದಿವಾಸಿಗಳೊಂದಿಗೆ ಕಳೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ರಾಣಾ ದಂಪತಿ ಶನಿವಾರ ಪಕ್ಷದ ಕಾರ್ಯಕರ್ತರೊಂದಿಗೆ ದ್ವಿಚಕ್ರ ವಾಹನದಲ್ಲಿ ಮೆಲ್ಘಾಟ್ ಗ್ರಾಮಕ್ಕೆ ಬಂದಿದ್ದಾರೆ.
ಮೆಲ್ಘಾಟ್‌ಗೆ ಆಗಮಿಸಿದ ರಾಣಾ ದಂಪತಿಗಳಿಗೆ ಸ್ಥಳೀಯ ಆದಿವಾಸಿಗಳು ಭವ್ಯ ಸ್ವಾಗತ ಕೋರಿದ್ದಾರೆ. ರಾಣಾ ದಂಪತಿಗಳು ಮೆಲ್ಘಾಟ್‌ಗೆ ಆಗಮಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಸಂಸದೆ ನವನೀತ್ ರಾಣಾ ಅವರು ತಮ್ಮ ಪತಿ ರವಿ ರಾಣಾ ಅವರೊಂದಿಗೆ ಪಿಲಿಯನ್ ರೈಡ್ ಮಾಡುತ್ತಿರುವುದು ಕಂಡು ಬಂದಿದೆ.
ರಾಣಾ ದಂಪತಿಗಳು ಬುಡಕಟ್ಟು ಜನಾಂಗದವರೊಂದಿಗೆ ಛಾಯಾಚಿತ್ರಗಳಿಗೆ ಪೋಸ್ ನೀಡಿದ್ದು, ನವನೀತ್ ರಾಣಾ ಆದಿವಾಸಿಗಳೊಂದಿಗೆ ಬುಡಕಟ್ಟು ಹಾಡುಗಳ ಟ್ಯೂನ್‌ಗಳಿಗೆ ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಕಾವು ಗ್ರಾಮದಲ್ಲಿ ನಡೆಯುತ್ತಿರುವ ನೃತ್ಯ ಸಮಾರಂಭದಲ್ಲಿ ಸಂಸದೆ ನವನೀತ್ ರಾಣಾ ಪಾಲ್ಗೊಳ್ಳುತ್ತಿರುವುದು ಸ್ಥಳೀಯ ಆದಿವಾಸಿಗಳ ಹೋಳಿ ಹಬ್ಬದಲ್ಲಿ ಹೊಸ ಉತ್ಸಾಹ ಮೂಡಿಸುತ್ತಿದೆ.
ಹೋಳಿ ಹಬ್ಬದ ನಿಮಿತ್ತ ಮೆಲ್ಘಾಟ್ ಪ್ರವಾಸದಲ್ಲಿದ್ದ ರಾಣಾ ದಂಪತಿ ದೂರದ ಸಾವ್ಲಾ ಗ್ರಾಮಕ್ಕೆ ಆಗಮಿಸಿದಾಗ ಸಂಸದರು ಗ್ರಾಮದ ಚಿಕ್ಕ ಟೀ ಸ್ಟಾಲ್‌ನಲ್ಲಿ ಒಲೆಯ ಮೇಲೆ ಚಹಾ ಮಾಡುತ್ತಿದ್ದ ದೃಶ್ಯ ಸ್ಥಳೀಯರಲ್ಲಿ ಸಂಭ್ರಮ ಮೂಡಿಸಿತು. ಆಕೆ ಟೀ ಸ್ಟಾಲ್‌ಗೆ ಭೇಟಿ ನೀಡಿದ ವಿಡಿಯೋ ಕೂಡ ವ್ಯಾಪಕವಾಗಿ ಶೇರ್ ಆಗುತ್ತಿದೆ.
ಇದನ್ನೂ ಓದಿ : ಹೋಳಿ 2023: ಹೋಲಿಕಾ ದಹನದ ಮಹತ್ವ, ಸಮಯ, ಆಚರಣೆಗಳ ಬಗ್ಗೆ ನಿಮಗೆಷ್ಟು ಗೊತ್ತು?