ಶಿಕಾರಿಪುರದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ; ವಿವಿಧ ರಾಜ್ಯಗಳ ಸ್ಪರ್ಧಿಗಳು ಭಾಗಿ - national level wrestling tournament
🎬 Watch Now: Feature Video
ಶಿವಮೊಗ್ಗ: ಕ್ರಿಕೆಟ್, ವಾಲಿಬಾಲ್ ರೀತಿಯ ಅನೇಕ ಆಟಗಳು ಗ್ರಾಮೀಣ ಯುವಕರನ್ನು ಸೆಳೆದ ಬಳಿಕ ಕುಸ್ತಿಯಂತಹ ಗ್ರಾಮೀಣ ಪಂದ್ಯಾವಳಿಗಳೇ ವಿರಳ ಎನ್ನುವಂತಾಗಿದೆ. ಎಲ್ಲೋ ದೊಡ್ಡ ಜಾತ್ರೆಗಳಲ್ಲಿ ಮಾತ್ರ ಅಪರೂಪವೆಂಬಂತೆ ಕುಸ್ತಿ ಪಂದ್ಯಾವಳಿಗಳು ಕಾಣಸಿಗುತ್ತವೆ. ಹೀಗಿರುವಾಗ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಯುವಕರ ತಂಡವೊಂದು ನಟ ದಿ.ಪುನೀತ್ ರಾಜಕುಮಾರ್ ಹೆಸರಿನಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಿ ಯಶಸ್ವಿಯಾಗಿದೆ.
ಶಿಕಾರಿಪುರದ ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿಯಲ್ಲಿ ಕರ್ನಾಟಕ ಮಾತ್ರವಲ್ಲದೇ ಹರಿಯಾಣ, ಪಂಜಾಬ್, ದೆಹಲಿ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು 40 ಮಂದಿ ಪಟುಗಳು ಭಾಗವಹಿಸಿದ್ದರು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಕುಸ್ತಿಪಟುಗಳು ಅಖಾಡದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.
ಯುವ ಕುಸ್ತಿ ಪಟುಗಳಿಗೂ ಪಂದ್ಯಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಸ್ಪೋರ್ಟ್ ಹಾಸ್ಟೆಲ್ನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವಿವಿಧ ಹಂತದಲ್ಲಿ ನಡೆದ ಕುಸ್ತಿಯಲ್ಲಿ ವಿಜೇತ ಕುಸ್ತಿಪಟುಗಳಿಗೆ ಪವರ್ ಸ್ಟಾರ್ ಕೇಸರಿ, ಕರ್ನಾಟಕ ಯುವರತ್ನ, ಶಿಕಾರಿಪುರ ಕುಮಾರ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಳ್ಳಿ ಗದೆ ಹಾಗೂ ನಗದು ಬಹುಮಾನವನ್ನೂ ನೀಡಲಾಯಿತು.
ಇದನ್ನೂ ಓದಿ: ಮಕ್ಕಳಂತೆ ಹಿಮದಲ್ಲಿ ಆಟವಾಡಿದ ರಾಹುಲ್ ಗಾಂಧಿ - ಸಹೋದರಿ ಪ್ರಿಯಾಂಕಾ