ಮೈಸೂರು ದಸರಾ : ಚಿನ್ನದ ಅಂಬಾರಿ ಹೊರುವ ಅಭಿಮನ್ಯು ವಿಶೇಷತೆ ಏನ್ ಗೊತ್ತಾ? - Mysuru Dasara 2023
🎬 Watch Now: Feature Video
Published : Sep 16, 2023, 5:06 PM IST
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಭರದ ಸಿದ್ಧತೆ ನಡೆಯುತ್ತಿದೆ. ಇದರ ಜೊತೆಗೆ ಐತಿಹಾಸಿಕ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಮಜ್ಜನ ನಡೆಯಿತು. ಅಂಬಾರಿ ಹೊರುವ ಅಭಿಮನ್ಯು ಆನೆಯು ಸೌನ್ಯ ಸ್ವಭಾವವನ್ನು ಹೊಂದಿದ್ದು, ಅಗಲವಾದ ಬೆನ್ನನ್ನು ಹೊಂದಿದೆ. ಹೀಗಾಗಿಯೇ ಚಿನ್ನದ ಅಂಬಾರಿಯನ್ನು ಅಭಿಮನ್ಯು ಆನೆಗೆ ಹೊರಿಸಲಾಗುತ್ತದೆ.
ನಾಡಹಬ್ಬ ದಸರಾದಲ್ಲಿ ಜಂಬೂಸವಾರಿ ಪ್ರಮುಖ ಆಕರ್ಷಣೆಯಾಗಿದೆ. ಈ ವೇಳೆ 750 ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಅಭಿಮನ್ಯು ಹೊರುತ್ತಾನೆ. ಈ ಸವಾರಿ ಅರಮನೆಯಿಂದ ರಾಜಪಥದಲ್ಲಿ ಬನ್ನಿ ಮಂಟಪದವರೆಗೆ ಸಾಗುತ್ತದೆ. ಈ ದೃಶ್ಯವನ್ನು ವೀಕ್ಷಿಸಲು ಲಕ್ಷಾಂತರ ಜನರು ಕಾತರದಿಂದ ಕಾಯುತ್ತಿರುತ್ತಾರೆ. ಅಭಿಮನ್ಯು ಆನೆಗೂ ಮೊದಲು ದ್ರೋಣ, ಬಲರಾಮ, ಅರ್ಜುನ ಆನೆಗಳು ಚಿನ್ನದ ಅಂಬಾರಿಯನ್ನು ಹೊರುತ್ತಿದ್ದವು.
ಮೈಸೂರು ದಸರಾ ವೀಕ್ಷಿಸಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಜೊತೆಗೆ ಇಲ್ಲಿ ಜಂಬೂ ಸವಾರಿಯನ್ನು ಕಂಡು ಮೂಕ ವಿಸ್ಮಿತರಾಗುತ್ತಾರೆ. ಈ ಹಿನ್ನೆಲೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ನಡೆಸಿದೆ.
ಇದನ್ನೂ ಓದಿ : ಮೈಸೂರು ದಸರಾ - 2023 : ಈ ಬಾರಿಯ ನಾಡಹಬ್ಬದ ಆಚರಣೆಯ ಸಂಪೂರ್ಣ ಮಾಹಿತಿ