ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ -VEDIO - ಮುನೇಗೌಡ
🎬 Watch Now: Feature Video
ಯಲಹಂಕ(ಬೆಂಗಳೂರು): ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದ JDS ಅಭ್ಯರ್ಥಿ ಎಂ ಮುನೇಗೌಡ ಯಲಹಂಕ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದರು. ತಂದೆ - ತಾಯಿ ಹಾಗೂ ಕುಟುಂಬದ ಸದಸ್ಯರ ಜೊತೆಗೆ ಮಾಜಿ ವಿಧಾನಪರಿಷತ್ ಸದಸ್ಯ ಈ ಕೃಷ್ಣಪ್ಪ ಹಾಗೂ ಮುಖಂಡ TCI ಚಂದ್ರಪ್ಪರ ಜೊತೆಗೆ ಪಂಚೆ ಧರಿಸಿ ಎತ್ತಿನಗಾಡಿಯಲ್ಲಿ ಹಳ್ಳಿ ಸೊಗಡಿನ ರೀತಿ ಬರಿಗಾಲಿನಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
ಇನ್ನು ಯಲಹಂಕದ ಕೋಗಿಲು ಕ್ರಾಸ್ನಿಂದ ಮಿನಿ ವಿಧಾನಸೌಧದವರೆಗೂ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಚಂಡಿ ವಾದ್ಯದ ಸದ್ದಿನಲ್ಲಿ ಆಗಮಿಸಿದ್ದು, ಎಲ್ಲರ ಗಮನ ಸೆಳೆಯಿತು. ನಾಮಪತ್ರ ಸಲ್ಲಿಸಿ ಹೊರಗೆ ಬಂದು ತಂದೆ - ತಾಯಿ ಹಾಗೂ ಹಿರಿಯರ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅಭ್ಯರ್ಥಿ ಮುನೇಗೌಡ ಒಂದೊಳ್ಳೆ ಶುಭ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಯಲಹಂಕ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಿದ್ದು ಈ ಬಾರಿ ನಾನು ಗೆಲ್ಲುವುದು ಸತ್ಯ ಮುಂದಿನ ತಿಂಗಳು ಭರ್ಜರಿ ಮತಗಳೊಂದಿಗೆ ವಿಜಯ ಪತಾಕೆ ಹಾರಿಸುತ್ತೇನೆ ಎಂದರು.
ರೈತನ ಮಗನಾಗಿದ್ದ ಕಾರಣಕ್ಕೆ ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಾಮಪತ್ರ ಹಿಂತೆಗೆದು ಕೊಳ್ಳುತ್ತಾರೆ ಎಂಬ ವದಂತಿಗೆ ತಿರುಗೇಟು ನೀಡಿದ ಅವರು ಯಾರು ಈ ಮಾತನ್ನ ಹೇಳಿದ್ದು, ಮುಂದೆ ಬರಲಿ, ಇಷ್ಟೆಲ್ಲ ಮಾಡಿರೋದು ವಿಥ್ ಡ್ರಾ ಮಾಡಲಿಕ್ಕೆ ಅಲ್ಲ ಎಂದರು.
ಇದನ್ನೂ ಓದಿ: ಕೃತಕ ಆನೆ ಮೇಲೆ ಕುಳಿತು ಬಂದು ನಾಮಪತ್ರ ಸಲ್ಲಿಸಿದ ಬಿಎಸ್‌ಪಿ ಅಭ್ಯರ್ಥಿ- ವಿಡಿಯೋ