ಕೊಡಗು ಜಿಲ್ಲೆಯ ಮುಳ್ಳೂರಿನಲ್ಲಿ ಮಾರ್ದನಿಸಿದ ಕನ್ನಡ - 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
🎬 Watch Now: Feature Video
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪುಟ್ಟ ಪುಟಾಣಿ ಮಕ್ಕಳೆಲ್ಲ ಕೈಯಲ್ಲಿ ಕನ್ನಡದ ಭಾವುಟ ಹಿಡಿದು ಕನ್ನಡ ಪರ ಘೋಷಣೆಗಳನ್ನ ಕೂಗುತ್ತಾ ಕನ್ನಡದ ಮಹತ್ವ ಸಾರುತ್ತಾ ಊರಿನ ಸುತ್ತ ಒಂದು ರೌಂಡ್ ಹಾಕಿದ್ರು. ಕನ್ನಡದ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿದ ಪುಟ್ಟ ಪುಟ್ಟ ವಿದ್ಯಾರ್ಥಿಗಳು ಕನ್ನಡ ಹಬ್ಬದಲಿ ಸಂಭ್ರಮಿಸಿದರಲ್ಲದೇ ಶಾಲಾ ಆವರಣದಲ್ಲಿ ನಿರ್ಮಿಸಲಾದ ಛಾಯಾಚಿತ್ರ ಪೆಟ್ಟಿಗೆಯಲ್ಲಿ ತಮ್ಮ ತಮ್ಮ ಛಾಯಾಚಿತ್ರಗಳನ್ನು ತೆಗೆದುಕೊಂಡು ಸಂಭ್ರಮಿಸಿದರು.
Last Updated : Feb 3, 2023, 8:31 PM IST