Turtles Dead: ಗುಜರಾತ್‌ನಲ್ಲಿ 100ಕ್ಕೂ ಹೆಚ್ಚು ಆಮೆಗಳ ನಿಗೂಢ ಸಾವು- ವಿಡಿಯೋ - ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ

🎬 Watch Now: Feature Video

thumbnail

By

Published : Jul 30, 2023, 11:57 AM IST

ಭಾವನಗರ (ಗುಜರಾತ್​) : ನೂರಕ್ಕೂ ಹೆಚ್ಚು ಆಮೆಗಳು ನಿಗೂಢವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಭಾವನಗರದ ಕುಂಬಾರವಾಡದಲ್ಲಿ ನಡೆದಿದೆ. ಇಲ್ಲಿನ ಕೊಳಚೆ ನೀರಿನ ಪ್ರದೇಶದಲ್ಲಿ ಆಮೆಗಳು ವಾಸಿಸುತ್ತಿದ್ದವು. ಕಳೇಬರ ಕಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆಮೆಗಳ ಸಾವು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಕುಂಬಾರವಾಡಿ ಸುಖ್ವಾಡಿ ಪ್ರದೇಶದಲ್ಲಿ ಮಳೆ ನೀರು ಮತ್ತು ಚರಂಡಿ ನೀರು ನಿಂತಿತ್ತು. ಇಲ್ಲಿ ಅನೇಕ ಆಮೆಗಳಿದ್ದವು. ಸ್ಥಳೀಯರು ನಿತ್ಯ ಬ್ರೆಡ್​ ಮುಂತಾದ ಆಹಾರ ಪದಾರ್ಥಗಳನ್ನು ಹಾಕುತ್ತಿದ್ದರು. ಆದರೆ ಶನಿವಾರ ರಾತ್ರಿ ಯಾರೋ ಬ್ರೆಡ್ ಹಾಕಿದ್ದು,​ ಇಂದು ಬೆಳಿಗ್ಗೆ ನೂರಾರು ಆಮೆಗಳು ಮೃತಪಟ್ಟಿವೆ. ಆಮೆಗಳ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇಲ್ಲಿ ಚರಂಡಿ ನೀರಿರುವ ಜಾಗದಲ್ಲಿ ಆಮೆಗಳು ಜೀವಂತವಾಗಿದ್ದು, ನೀರು ಹೊರ ಹೋಗುವ ಜಾಗದಲ್ಲಿ ಮಾತ್ರ ಆಮೆಗಳು ಮೃತಪಟ್ಟಿರುವುದು ಕಂಡುಬಂದಿದೆ.

ಮೃತ ಆಮೆಗಳನ್ನು ಇಲ್ಲಿನ ಕೊಳಚೆ ನೀರಿನ ಪ್ರದೇಶದಿಂದ ಅರಣ್ಯ ಇಲಾಖೆಯ ತಂಡ ಹೊರತೆಗೆದಿದೆ. ಇವುಗಳ ಮರಣೋತ್ತರ ಪರೀಕ್ಷೆ ನಡೆಸಿ ಸಾವಿನ ಕಾರಣ ತಿಳಿಯಲು ಜುನಾಗಢಕ್ಕೆ ಕಳುಹಿಸಲಾಗುತ್ತದೆ ಎಂದು ಅರಣ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದನ್ನೂ ಓದಿ : ಬೋರ್​ವೆಲ್​​ಗೆ ಬಿದ್ದ 2 ವರ್ಷದ ಬಾಲಕಿ: 2 ಗಂಟೆಗಳ ಕಾರ್ಯಾಚರಣೆ ಬಳಿಕ ಮಗು ರಕ್ಷಣೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.