ಬಿಹಾರ: ಮಧ್ಯಾಹ್ನದ ಬಿಸಿಯೂಟ ತಿಂದ 150 ಮಕ್ಕಳು ಅಸ್ವಸ್ಥ
🎬 Watch Now: Feature Video
ಬಗಾಹಾ: ಬಿಹಾರದ ಬಗಾಹಾದ ನರ್ವಾಲ್-ಬರ್ವಾಲ್ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ ಸುಮಾರು 150 ವಿದ್ಯಾರ್ಥಿಗಳು ಹಠಾತ್ ಅಸ್ವಸ್ಥರಾದ ಘಟನೆ ನಡೆದಿದೆ. ತಕ್ಷಣವೇ ಮಕ್ಕಳನ್ನೆಲ್ಲ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಮಕ್ಕಳ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಪೋಷಕರು ಶಾಲೆಯಲ್ಲಿ ಗಲಾಟೆ ನಡೆಸಿದ್ದಾರೆ. ಎನ್‌ಜಿಒ ವಿರುದ್ಧ ಪೋಷಕರು ವಾಗ್ದಾಳಿ ನಡೆಸಿದ್ದಾರೆ. ಇಡೀ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಪ್ರಸ್ತುತ ಉಪವಿಭಾಗೀಯ ಆಸ್ಪತ್ರೆಯಲ್ಲಿ ಸುಮಾರು 100 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಲೆಯಿಂದ ಆಸ್ಪತ್ರೆವರೆಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಶಾಲೆಗಳಿಗೆ ಎನ್‌ಜಿಒ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ. ಎನ್‌ಜಿಒ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟವಿಲ್ಲದ ಆಹಾರವನ್ನು ನೀಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಸದ್ಯ ಆಸ್ಪತ್ರೆಯ ಬೆಡ್‌ಗಳಲ್ಲಿ ಮಕ್ಕಳೇ ತುಂಬಿದ್ದು, ಸುತ್ತಲೂ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇಷ್ಟು ಮಾತ್ರವಲ್ಲದೇ ಇದೇ ಎನ್‌ಜಿಒ ಸಂಸ್ಥೆಯಿಂದ ಇನ್ನೊಂದು ಶಾಲೆಗೆ ಊಟ ನೀಡಲಾಗಿತ್ತು. ಹಾಗಾಗಿ ಆ ಶಾಲೆಯ ಹಲವು ಮಕ್ಕಳನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ.
ಎನ್‌ಜಿಒ ಮೂಲಕ ಶಾಲೆಗೆ ಆಹಾರ ತರಲಾಗುತ್ತಿದೆ. ಆಹಾರ ಸೇವಿಸಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಈ ಹಿಂದೆ ಶಾಲೆಯಲ್ಲಿ ಅಡುಗೆ ಮಾಡಲಾಗುತ್ತಿದ್ದ ಆಹಾರ ಗುಣಮಟ್ಟದ್ದಾಗಿತ್ತು. ಆದರೆ, ಆ ಜವಾಬ್ದಾರಿಯನ್ನು ಎನ್‌ಜಿಒಗೆ ನೀಡಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಹಲವು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಗಾರ್ಡಿಯನ್ ಮುನ್ನಾ ಕುಮಾರ್ ಹೇಳಿದ್ದಾರೆ.
ಅಸ್ವಸ್ಥಗೊಂಡು 150 ಮಕ್ಕಳಲ್ಲಿ 100 ಮಕ್ಕಳ ಮೇಲೆ ನಿಗಾ ಇರಿಸಲಾಗಿದೆ. ಕೆಲವರಿಗೆ ಯಾವುದೇ ತೊಂದರೆಗಳಾಗಿಲ್ಲ. ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ಕೂಡ ಆಹಾರವನ್ನು ಪರೀಕ್ಷಿಸುತ್ತಾರೆ ಅವರನ್ನು ಕೂಡ ಈ ಬಗ್ಗೆ ಪ್ರಶ್ನಿಸಲಾಗಿದೆ. ಎನ್‌ಜಿಒ ಅನ್ನು ಸಹ ಪ್ರಶ್ನಿಸಲಾಗುತ್ತದೆ. ಬಗಾಹಾ ಎಸ್‌ಡಿಎಂ ಡಾ ಅನುಪಮಾ ಸಿಂಗ್ ತಿಳಿಸಿದ್ದಾರೆ.
ಇದನ್ನೂ ನೋಡಿ: ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವು ಪತ್ತೆ: 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ