ಅನ್ನ ನೀಡಿದ ವಿಶ್ವಾಸ.. ವೈಕುಂಠ ಯಾತ್ರೆಯ ವಾಹನದ ಹಿಂದೆ ಓಡೋಡಿ ಬಂದ ಕೋತಿ! - ಕೋತಿಯೊಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರುವ ಘಟನೆ
🎬 Watch Now: Feature Video
ಅನ್ನ ನೀಡಿದ ಕೈಗಳನ್ನು ಆ ಮೂಕಜೀವಿ ಮರೆಯಲಿಲ್ಲ. ತನ್ನ ಹಸಿವು ನೀಗಿಸಿದವರು ಇನ್ನಿಲ್ಲ ಎಂದು ತಿಳಿದ ಕೋತಿಯೊಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ನಂದ್ಯಾಲ ಜಿಲ್ಲೆಯ ಕೊಂಡಪೇಟೆ ನಿವಾಸಿ ಲಕ್ಷ್ಮಿದೇವಿ ಎಂಬ ಮಹಿಳೆ ರಸ್ತೆ ಬದಿ ಮಿರ್ಚಿ ಅಂಗಡಿ ನಡೆಸುತ್ತಿದ್ದರು. ಪ್ರತಿದಿನ ಅವರು ಕೋತಿಯೋದಕ್ಕೆ ಆಹಾರ ನೀಡುತ್ತಿದ್ದರು. ಈ ಅನುಕ್ರಮದಲ್ಲಿ ಕೋತಿ ಸಹ ಲಕ್ಷ್ಮಿದೇವಿ ಮೇಲೆ ಅಪಾರ ನಂಬಿಕೆಯನ್ನಟ್ಟಿತು. ಲಕ್ಷ್ಮಿದೇವಿ ಗುರುವಾರ ಹೃದಯಾಘಾತದಿಂದ ನಿಧನರಾದರು. ಎಂದಿನಂತೆ ಬಂದ ಕೋತಿಯು ಲಕ್ಷ್ಮಿ ದೇವಿಯನ್ನು ಕಾಣದೇ ಸ್ವಲ್ಪ ಹೊತ್ತು ಮನೆಯ ಸುತ್ತ ಸುತ್ತಾಡಿದೆ. ನಂತರ ಮಹಿಳೆ ಮೃತಪಟ್ಟಿರುವುದು ಕೋತಿಗೆ ಕಂಡು ಬಂದಿದೆ. ಜನಸಂದಣಿಯಿಂದ ದೂರದಲ್ಲಿ ಸೌಮ್ಯವಾಗಿ ಕೋತಿ ಗಮನಿಸುತ್ತಿತ್ತು. ಸ್ವಲ್ಪ ಸಮಯದ ನಂತರ ವೈಕುಂಠ ಯಾತ್ರೆ ಚಲಿಸುವಾಗ ವಾಹನದ ಹಿಂದೆ ಓಡಿತು. ಲಕ್ಷೀದೇವಿ ಮತ್ತು ಕೋತಿ ಪ್ರೀತಿ ಕಂಡ ಜನರ ಕಣ್ಣಲ್ಲಿ ನೀರು ತರಿಸಿತು.
Last Updated : Feb 3, 2023, 8:29 PM IST