ಹಾವೇರಿ: 30 ಕಿಲೋ ಮೀಟರ್ ದೂರ ಬಸ್ನಲ್ಲಿ ಪ್ರಯಾಣಿಸಿದ ಕೋತಿ- ವಿಡಿಯೋ - ಹಿರೇಕೆರೂರು ತಾಲೂಕು ಹಂಸಭಾವಿ
🎬 Watch Now: Feature Video
Published : Oct 4, 2023, 9:56 PM IST
ಹಾವೇರಿ : ಸಾಮಾನ್ಯವಾಗಿ ಬಸ್ನಲ್ಲಿ ಜನರು ಪ್ರಯಾಣಿಸುತ್ತಾರೆ. ಆದರೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಏರಿದ ಮಂಗವೊಂದು ಬಸ್ನಿಂದ ಕೆಳಗಿಳಿಯದೆ ಕೆಲಕಾಲ ಪ್ರಯಾಣಿಸಿತು. ಇಂಥದ್ದೊಂದು ಕುತೂಹಲದ ಘಟನೆ ಹಾವೇರಿ ಬಸ್ ನಿಲ್ದಾಣದಲ್ಲಿ ನಡೆಯಿತು. ಹಾವೇರಿ ಬಸ್ ನಿಲ್ದಾಣದಿಂದ ಹಿರೇಕೆರೂರು ಬಸ್ನಲ್ಲಿ ಕೋತಿ ಪ್ರಯಾಣಿಸಿ ಗಮನ ಸೆಳೆಯಿತು.
ಇದನ್ನೂ ಓದಿ: ನೋಡಿ: ಹೋಟೆಲ್‌ಗೆ ಬಂದು ಟೀ ಕುಡಿದು ಹೋಗುವ ಕೋತಿ, ಲೋಟ ಟೇಬಲ್ ಮೇಲಿಟ್ಟು ಹೋಗುತ್ತಂತೆ!
30 ಕಿ.ಮೀ ಮೀಟರ್ ದೂರ ಪ್ರಯಾಣಿಸಿದ ಕೋತಿ: ಬಸ್ ಕಿಟಕಿ ಪಕ್ಕದಲ್ಲಿ ಕುಳಿತ ಕೋತಿ ಯಾರಿಗೂ ಭಯಪಡದೆ ಪ್ರಯಾಣ ಮಾಡಿದೆ. ಕೋತಿ ಕಂಡು ಖುಷಿಯಾದ ಪ್ರಯಾಣಿಕರು ಅದಕ್ಕೆ ಬಿಸ್ಕೆಟ್, ಹಣ್ಣು ಕೊಟ್ಟು ಸತ್ಕರಿಸಿದರು. ಹಾವೇರಿ ಬಸ್ ನಿಲ್ದಾಣದಿಂದ ಕೋತಿ ಹಿರೇಕೆರೂರು ತಾಲೂಕು ಹಂಸಭಾವಿವರೆಗೆ ಸುಮಾರು ಮೂವತ್ತು ಕಿಮೀ ಮೀಟರ್ ದೂರದವರೆಗೆ ಕೋತಿ ಪ್ರಯಾಣಿಸಿದ್ದು ವಿಶೇಷವಾಗಿತ್ತು. ಪ್ರಯಾಣಿಕ ಗಣೇಶ ನೂಲಗೇರಿ ಈ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಕೋತಿ ಕಾಟಕ್ಕೆ ಬೇಸತ್ತ ಜನರು..ಮನೆಯಿಂದ ಹೊರಬರಲು ಹಿಂದೇಟು!