Watch... ಮಾಲೀಕನಿಗೆ ಮುತ್ತಿಟ್ಟು ಅಂತಿಮ ನಮನ ಸಲ್ಲಿಸಿದ ಕಪಿರಾಯ - ಹಗರಿಬೊಮ್ಮನ ಹಳ್ಳಿ ಪಟ್ಟಣದಲ್ಲಿ ಈ ಘಟನೆ
🎬 Watch Now: Feature Video
ವಿಜಯನಗರ : ನಿತ್ಯ ಬಾಳೆಹಣ್ಣು ಕೊಡುತ್ತಿದ್ದ ಮಾಲೀಕನಿಗೆ ಮುತ್ತಿಟ್ಟು ಅಂತಿಮ ನಮನ ಸಲ್ಲಿಸಿದ ಕಪಿರಾಯನ ಈ ವಿಡಿಯೋ ಮನುಕುಲವನ್ನೇ ನಾಚಿಸುವಂತಿದೆ. ಹೌದು, ಹಗರಿಬೊಮ್ಮನ ಹಳ್ಳಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಪಟ್ಟಣದ ನಿವಾಸಿ ಪರಶುರಾಮ್ ಷಾ (88) ಮೃತಪಟ್ಟಿದ್ದಾರೆ. ನಿತ್ಯ ಬಾಳೆಹಣ್ಣು ಕೊಟ್ಟು ತಮಗೆ ಸಹಾಯ ಮಾಡಿದ ವ್ಯಕ್ತಿಯ ಸಾವಿನ ಬಳಿಕ ಸ್ಥಳಕ್ಕೆ ಬಂದ ಕೋತಿ ಹಣೆಗೆ ಮುತ್ತಿಟ್ಟು ಅಂತಿಮ ನಮನ ಸಲ್ಲಿಸಿ ಗೌರವ ಸಲ್ಲಿಸಿದೆ.
ಹನುಮ ಜಯಂತಿಯ ದಿನದಂದೇ ಮೃತರಾದ ಷಾ : ಎರಡು ತಿಂಗಳ ಹಿಂದೆ ಪರಶುರಾಮ್ ಷಾ ಮತ್ತು ಕೋತಿಯ ಒಡನಾಟ ಪ್ರಾರಂಭವಾಗಿತ್ತು. ಹನುಮ ಜಯಂತಿಯ ದಿನದಂದೇ ಪರಶುರಾಮ್ ಷಾ ಮೃತಪಟ್ಟಿದ್ದಾರೆ. ಸಾವಿನ ಹಿಂದಿನ ದಿನ ಹುಟ್ಟುಹಬ್ಬ ಕೂಡ ಇತ್ತು. ಪರಶುರಾಮ್ ಷಾ ಮದ್ಯಪ್ರಿಯರಾಗಿರೋ ಕಾರಣ ಸಾವಿನ ಹಿಂದಿನ ದಿನ ಕುಟುಂಬಸ್ಥರು ಮದ್ಯದ ಬಾಟಲ್ ಮಾದರಿಯ ಕೇಕ್ ಕತ್ತರಿಸಿ ಸಂಭ್ರಮದಿಂದ ಹುಟ್ಟು ಹಬ್ಬ ಕೂಡಾ ಆಚರಿಸಿದ್ದರು.
ಇದನ್ನೂ ಓದಿ; ಹೆಚ್ಚಿದ ಧಗೆ: ಹೊರಬರುತ್ತಿರುವ ಹಾವುಗಳು, ತಿಂಗಳಲ್ಲಿ 150 ಹಾವು ಹಿಡಿದ ತುಮಕೂರು ಉರಗ ತಜ್ಞ