ವಿದ್ಯುತ್ ತಂತಿಯಲ್ಲಿ ಸಿಲುಕಿದರೂ ಪ್ರಾಣ ಉಳಿಸಿಕೊಂಡ ಕೋತಿ.. VIDEO - The roof of the house
🎬 Watch Now: Feature Video
ಕೋತಿಯೊಂದು ತನ್ನ ಚಿಕ್ಕ ಮರಿಯೊಂದಿಗೆ ವಿದ್ಯುತ್ ತಂತಿಯ ಮೇಲೆ ಸಿಲುಕಿಕೊಂಡು ಅಪಾಯಕ್ಕೆ ಸಿಲುಕಿತ್ತು. ಆದರೆ ಕೊನೆಗೆ ತನ್ನನ್ನು ತಾನೇ ರಕ್ಷಿಸಿಕೊಂಡ ಘಟನೆ ಅಮರಾವತಿ ನಗರದ ವಡಾಲಿ ಪ್ರದೇಶದಲ್ಲಿ ನಡೆದಿದೆ. ತನ್ನ ಮರಿಯೊಂದಿಗೆ ಸಿಲುಕಿಕೊಂಡ ಕೋತಿ ಹೊರ ಬರಲು ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಿದೆ. ಇದನ್ನೂ ನೋಡಿದ ಅಲ್ಲಿಯ ನಾಗರಿಕರು ಬಿದಿರಿನ ಕೋಲು ನೀಡಿ ಸಹಾಯ ಮಾಡಿದ್ದಾರೆ. ಆದರೆ ಮರಿಯಿದ್ದ ಕಾರಣ ಕೋತಿಗೆ ಬೇರೆ ಕಡೆ ಜಿಗಿಯಲು ಸಾಧ್ಯವಾಗಿಲ್ಲ. ಹಾಗಾಗಿ ಅದು ಅಲ್ಲೇ ಪರದಾಟ ನಡೆಸಿತ್ತು. ಈ ಕೋತಿಯನ್ನು ರಕ್ಷಿಸಲು ಅದರ ಸಹ ಕೋತಿಗಳು ಸಹ ಸಾಕಷ್ಟು ಪ್ರಯತ್ನಿಸಿದವು. ಕೊನೆಗೆ ಹೇಗೋ ನೇತಾಡಿ ನೇತಾಡಿ ಹತ್ತಿರವಿದ್ದ ಮನೆಯ ಮೇಲ್ಛಾವಣಿಯನ್ನು ತನ್ನ ಮಗುವಿನೊಂದಿಗೆ ಸುರಕ್ಷಿತವಾಗಿ ತಲುಪಿದೆ. ಇದೀಗ ಅದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Last Updated : Feb 3, 2023, 8:37 PM IST