ದಾವಣಗೆರೆ : 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದ ಕೋತಿ ಸೆರೆ.. - Monkey caught by forest dept
🎬 Watch Now: Feature Video
Published : Aug 24, 2023, 7:14 PM IST
ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಕೋತಿಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಸುಮಾರು 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದ್ದ ಕೋತಿಯನ್ನು ಕೊನೆಗೂ ಸೆರೆಹಿಡಿಯಲಾಗಿದೆ. ಈ ಕೋತಿಯ ಉಪಟಳದಿಂದ ಕುಂದುವಾಡದ ಶಾಲೆಗೆ ತೆರಳಲು ವಿದ್ಯಾರ್ಥಿಗಳು ಭಯಪಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅಲ್ಲದೆ ಬೈಕ್ ಸವಾರರನ್ನು ಗುರಿಯಾಗಿಸಿ ಈ ಕೋತಿ ದಾಳಿ ನಡೆಸುತ್ತಿತ್ತು.
ಇದರಿಂದ ಬೇಸತ್ತ ಜನರು ಮಂಗನನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಕೋತಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ಶಶಿಧರ್ ನೇತೃತ್ವದಲ್ಲಿ ಬೋನು ಇರಿಸಲಾಗಿತ್ತು. ಕಳೆದ ದಿನ ಬೋನಿನ ಒಳಗೆ ಹೋಗಿದ್ದ ಕೋತಿ ಸ್ವಲ್ಪದರಲ್ಲೇ ಪರಾರಿಯಾಗಿತ್ತು. ಕೊನೆಗೆ ಇಂದು ಕೋತಿಯು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹರೀಶ್, ಮರು ಸಿದ್ದಪ್ಪ ದೇವರಾಜ್, ಶರಣಪ್ಪ ಹಾಗೂ ಹಿದಾಯತ್ ಮುಂತಾದವರಿದ್ದರು. ಸೆರೆ ಸಿಕ್ಕ ಕೋತಿಯನ್ನು ಕಾಡಿಗೆ ಬಿಡಲು ಅರಣ್ಯ ಇಲಾಖೆ ಸಿಬ್ಬಂದಿ ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ: ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಮಂಗ ಸೆರೆ, ನಿಟ್ಟುಸಿರು ಬಿಟ್ಟ ಜನರು