ಹುಲಿ ಕುಣಿತದಲ್ಲಿ ಸ್ಟೆಪ್ ಹಾಕಿದ ಪುತ್ತೂರು ಶಾಸಕ ಸಂಜೀವ ಮಠಂದೂರು: ವಿಡಿಯೋ

🎬 Watch Now: Feature Video

thumbnail

By

Published : Oct 2, 2022, 10:29 PM IST

Updated : Feb 3, 2023, 8:28 PM IST

ಪುತ್ತೂರು: ನವರಾತ್ರಿ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹುಲಿಕುಣಿತ ಮನೋರಂಜನಾ ಕಲೆಯಾಗಿ ಪ್ರಸಿದ್ಧಿಯಾಗಿದೆ. ಹುಲಿಕುಣಿತದ ತಾಸೆಯ ಪೆಟ್ಟಿಗೆ ಹೆಜ್ಜೆ ಹಾಕದ ಮಂದಿ ವಿರಳ. ತಾಸೆಯ ಪೆಟ್ಟು ಬಡವನಿಂದ ಬಲ್ಲಿದನವರೆಗೂ, ಮಕ್ಕಳಿಂದ ಇಳಿವಯಸ್ಸಿನವರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಈ ರೀತಿ ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹುಲಿ ವೇಷಧಾರಿಗಳೊಂದಿಗೆ ತಾಸೆ ಬಡಿತಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ಈಗ ವೈರಲ್​ ಆಗುತ್ತಿದೆ. ಪುತ್ತೂರು ಮಿನಿ ವಿಧಾನಸೌಧದ ಮುಂದೆ ಅಧಿಕಾರಿಗಳು ಹಾಗೂ ಶಾಸಕರ ನೇತೃತ್ವದಲ್ಲಿ ಹುಲಿ ವೇಷಧಾರಿಗಳ ಕುಣಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹುಲಿ ವೇಷಧಾರಿಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಶಾಸಕರೂ ಹುಲಿ ಹೆಜ್ಜೆ ಹಾಕಿ ಮನೋರಂಜನೆ ನೀಡಿದ್ದಾರೆ‌. ಶಾಸಕರಿಗೆ ಸ್ಥಳದಲ್ಲಿದ್ದವರೂ ಸಾಥ್ ನೀಡಿದ್ದಾರೆ.
Last Updated : Feb 3, 2023, 8:28 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.