ಕಳಪೆ ಕಾಮಗಾರಿ ಆರೋಪ ಗುತ್ತಿಗೆದಾರರಿಗೆ ಶಾಸಕರ ತರಾಟೆ.. ಸ್ಥಳದಲ್ಲೇ ಕನ್ನಡಕ ಕಿತ್ತು ಬಿಸಾಡಿದ ಎಂಎಲ್​ಎ - Accused locals complained to MLA

🎬 Watch Now: Feature Video

thumbnail

By

Published : Jan 4, 2023, 8:29 PM IST

Updated : Feb 3, 2023, 8:38 PM IST

ರಾಯಚೂರು: ಕಳಪೆ ಕಾಮಗಾರಿ ಮತ್ತು ಸಮಯಕ್ಕೆ ಸರಿಯಾಗಿ ಕಾಮಗಾರಿಯನ್ನು ಪೂರ್ಣಗೊಳಿಸದಿರುವುದಕ್ಕೆ ರಸ್ತೆಯಲ್ಲಿ ನಿಲ್ಲಿಸಿಕೊಂಡು ಸಾರ್ವಜನಿಕರ ಎದುರೇ ಗುತ್ತಿದಾರ ಮತ್ತು ಇಂಜಿನಿಯರ್​ಗೆ ಮಾನವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಈ ಘಟನೆ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿ ರಸ್ತೆಯ ಡಿವೈಡರ್ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಪರಿಶೀಲನೆ ನಡೆಸಿದ ಶಾಸಕರು ಕಾಮಗಾರಿ ಇನ್ನೂ ಪೂರ್ಣಗೊಳಿಸದೆ ಇವರುವುದಕ್ಕೆ ಆಕ್ರೋಶಗೊಂಡು ಗುತ್ತಿಗೆದಾರನ ಕನ್ನಡಕವನ್ನು ಕಿತ್ತೆಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.