'ನೀನು ಯಾರೆಂದು ಗೊತ್ತಿಲ್ಲ..': ಶಾಸಕ ಗೋಪಾಲಕೃಷ್ಣ ಬೇಳೂರು-ಅಜ್ಜಿಯ ಮಾತುಕತೆ ವಿಡಿಯೋ ವೈರಲ್ - MLA Gopalakrishna Belur
🎬 Watch Now: Feature Video
ಶಿವಮೊಗ್ಗ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು, ನೀನು ಯಾರೆಂದು ಗೊತ್ತಿಲ್ಲ ಎಂದು ವೃದ್ಧೆಯೊಬ್ಬರು ಹೇಳಿದ ವಿಡಿಯೋ ವೈರಲ್ ಆಗಿದೆ. ಗೋಪಾಲಕೃಷ್ಣ ಬೇಳೂರು ಅವರು ನಿನ್ನೆ ಮಳೆ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡುವ ವೇಳೆ, ರಸ್ತೆ ಪಕ್ಕದ ಕಟ್ಟೆ ಮೇಲೆ ವೃದ್ಧೆಯೊಬ್ಬರು ಕುಳಿತುಕೊಂಡು ಗದ್ದೆಯಲ್ಲಿ ನಾಟಿ ನಡೆಯುತ್ತಿದ್ದನ್ನು ನೋಡುತ್ತಿದ್ದರು. ಈ ವೇಳೆ ತಮ್ಮ ಕಾರಿನಿಂದ ಇಳಿದು ಬಂದ ಶಾಸಕರು, ಕಟ್ಟೆ ಮೇಲೆ ಕೂತಿದ್ದ ಅಜ್ಜಿ ಬಳಿ ಕುಶಲೋಪರಿ ವಿಚಾರಿಸಿದರು.
ಇಲ್ಲಿ ಕುಳಿತುಕೊಂಡು ಏನ್ ಮಾಡುತ್ತಿದ್ದಿಯಾ ಅಜ್ಜಿ? ನೀನು ನಾಟಿ ನೋಡಲು ಬಂದಿದ್ದೀಯಾ ಅಥವಾ ನಾಟಿ ಮಾಡಲು ಬಂದಿದ್ದೀಯಾ ಎಂದು ಶಾಸಕರು ಕೇಳುತ್ತಾರೆ. ಇಲ್ಲ, ನಾನು ಹೀಗೆ ಮುಂದೆ ಹೋಗ್ತಿದ್ದೆ. ಸುಮ್ಮನೆ ಇಲ್ಲಿ ಕುಳಿತುಕೊಂಡೆ ಎಂದು ಅಜ್ಜಿ ಹೇಳುತ್ತಾರೆ. ಆಗ ಗೋಪಾಲಕೃಷ್ಣ ಬೇಳೂರು, ನಾನು ಯಾರೆಂದು ಗೂತ್ತೇ ಎಂದು ಕೇಳಿದಾಗ ಅಜ್ಜಿ, ಗೊತ್ತಿಲ್ಲಪ್ಪಾ ಎಂದು ಹೇಳುತ್ತಿದ್ದಂತಯೇ ಶಾಸಕರು ನಾನು ಗೋಪಾಲಕೃಷ್ಣ ಬೇಳೂರು ಎಂದು ಹೇಳುತ್ತಾರೆ. ಆಗ ಅಜ್ಜಿ, ನಾನು ನಿಮಗೆ ಓಟ್ ಹಾಕಿದ್ದು ಎಂದು ಹೇಳುತ್ತಾರೆ. ನೀವು ಗೆದ್ದ ಮೇಲೆ ನಮ್ಮೂರಲ್ಲಿ ಪಟಾಕಿ ಹೊಡೆದ್ರು ಎಂಬ ಅಜ್ಜಿ ಹೇಳಿಕೆಯಿಂದ ಖುಷಿಯಾದ ಶಾಸಕರು, ನಗುತ್ತಲೇ ಅಜ್ಜಿ ನನಗೆ ಓಟ್ ಹಾಕಿದ್ದಂತೆ ಎಂದು ಖುಷಿಯಿಂದ ಅಜ್ಜಿ ಜೊತೆ ಮಾತನಾಡಿ ತಮ್ಮಲ್ಲಿದ್ದ ಹಣ ನೀಡಿ ಮುಂದೆ ಸಾಗಿದರು.
ಇದನ್ನೂ ನೋಡಿ: ಮಳೆಯಿಂದ ನಿಂತ ನೀರಲ್ಲಿ ಹಾವುಗಳ ಸರಸ ಸಲ್ಲಾಪ - ವಿಡಿಯೋ ವೈರಲ್