ವೈರಲ್ ಆಡಿಯೋ ಬಗ್ಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಸ್ಪಷ್ಟನೆ - ಹೈಕಮಾಂಡ್ ಹಾಗೂ ರಾಜ್ಯ ನಾಯಕರ
🎬 Watch Now: Feature Video
ರಾಯಚೂರು: ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ಧ್ವನಿಯದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋ ಗ್ಗೆ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ. ''ಆಡಿಯೋದಲ್ಲಿರುವ ಧ್ವನಿ ನನ್ನದೆ. ಆದರೆ, ಸಂಪೂರ್ಣ ಎಡಿಟ್ ಮಾಡಲಾಗಿದೆ. ದೇವರು ಸೇರಿದಂತೆ ಇನ್ನಿತರ ವಿಷಯಗಳು ಹೇಳಿರುವುದು ನನ್ನ ಧ್ವನಿಯಲ್ಲ. ಇದು ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆನ್ನುವುದು ಒಂದು ವರ್ಷದ ಹಿಂದೆಯೇ ಗೊತ್ತಿದೆ. ಸಂಪೂರ್ಣ ಎಡಿಟ್ ಆಗಿರುವ ಆಡಿಯೋ ಇದಾಗಿದೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಗಮನಕ್ಕೆ ತಂದಿದ್ದೇನೆ. ಎಂಟು ತಿಂಗಳ ಹಿಂದೆಯೇ ನಾನು ಪಕ್ಷದ ನಾಯಕರಿಗೆ ಸ್ಪಷ್ಟನೆ ನೀಡಿದ್ದೇನೆ. ಮೋದಿಯವರ ಬಗ್ಗೆ, ರಾಜ್ಯ ನಾಯಕರ ಬಗ್ಗೆ, ಪಕ್ಷದ ಬಗ್ಗೆ ಅಪಾರವಾದ ಗೌರವವಿದೆ. ಈ ಬಗ್ಗೆ ನಮ್ಮ ಕಾರ್ಯಕರ್ತರು ಎದೆಗುಂದಬಾರದು. ನನ್ನ ಮೇಲೆ ಯಾವುದೇ ಆಪಾದನೆ ಇಲ್ಲದ ಸಮಯದಲ್ಲಿ ಈ ರೀತಿಯ ವೈಯಕ್ತಿಕ ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಾರೆ. ಇದರಲ್ಲಿ ರಾಜಕೀಯ ನಡೆದಿದೆ. ತಂತ್ರ ಮಾಡಬೇಕು, ಆದರೆ ಕುತಂತ್ರ ರಾಜಕಾರಣ ಮಾಡುತ್ತಾರೆ. ಇದರ ಬಗ್ಗೆ ಸಮಯ ಬಂದಾಗ ನಾನೇ ಎಲ್ಲವನ್ನು ಹೇಳುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಧ್ವನಿಯದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು ಈ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಕಾರು ತಪಾಸಣೆ ನಡೆಸಿದ ಪೊಲೀಸರು: ವಿಡಿಯೋ