7 ವರ್ಷದವಳಿದ್ದಾಗ ನಾಪತ್ತೆ: 9 ವರ್ಷಗಳ ಬಳಿಕ ಕುಟುಂಬ ಸೇರಿದ ಬಾಲಕಿ - ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್
🎬 Watch Now: Feature Video
ಮುಂಬೈ: ಅಂಧೇರಿಯ ಡಿ.ಎನ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 2013 ರ ಜನವರಿ 22ರಂದು ಬಾಲಕಿ ನಾಪತ್ತೆಯಾಗಿದ್ದಳು. ಆ ಸಮಯದಲ್ಲಿ ಆಕೆಗೆ 7 ವರ್ಷ. ಹೀಗೆ ಕಾಣೆಯಾದ ಬಾಲಕಿ ಇದೀಗ 9 ವರ್ಷಗಳ ನಂತರ ಕುಟುಂಬ ಸೇರಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೋಜಾ ಹಾಗು ಆತನ ಪತ್ನಿ ಸೋನಿ ಎಂಬುವರನ್ನು ಬಂಧಿಸಲಾಗಿದೆ. ಸ್ವಂತ ಮಕ್ಕಳಿಲ್ಲದ ಕಾರಣ ಆರೋಪಿಗಳು, ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
Last Updated : Feb 3, 2023, 8:26 PM IST