ನವೆಂಬರ್ 10 ರವರೆಗೆ ಕಾದು ನೋಡಿ ಬಿಜೆಪಿಯಲ್ಲಿ ಏನಾಗುತ್ತೆ ಅಂತ: ಜಮೀರ್ ಅಹ್ಮದ್ - etv bharat karnataka
🎬 Watch Now: Feature Video
Published : Nov 1, 2023, 7:22 AM IST
ವಿಜಯನಗರ: ರಾಜ್ಯ ಬಿಜೆಪಿಯಲ್ಲಿ ಏನಾಗಲಿದೆ ನವೆಂಬರ್ 10 ರವರೆಗೂ ಕಾದು ನೋಡಿ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ವಿಜಯನಗರ ಪ್ರವಾಸದಲ್ಲಿರುವ ಅವರು ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ಅವರು ಏನೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಸರ್ಕಾರಕ್ಕೆ ಏನೂ ಆಗದು. 65 ಶಾಸಕರನ್ನು ಇಟ್ಟುಕೊಂಡು ಹಗಲು ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮೊದಲು ಬಿಜೆಪಿ ಶಾಸಕರನ್ನು ಹಿಡಿದು ಇಟ್ಟುಕೊಳ್ಳಲಿ. ಕಾಂಗ್ರೆಸ್ನ ಒಬ್ಬ ಶಾಸಕ ಸಹ ಹೋಗಲ್ಲ. ಇನ್ನೊಂದು ವಾರ ಅಥವಾ ಹತ್ತು ದಿನ ಕಾದು ನೋಡಿ ಹೇಗೆ ಸ್ಫೋಟ ಆಗುತ್ತೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ. ನಮ್ಮದು ಒಂದೇ ಬಣ ಅದು ಕಾಂಗ್ರೆಸ್ ಬಣ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬಿಷ್ಣಹಳ್ಳಿಯ ದಳವಾಯಿ ಸಿದ್ದಪ್ಪ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಮಂಗಳವಾರ ರಾತ್ರಿ ಆಗಮಿಸಿ ಸನ್ಮಾನಿಸಿದರು. ಸಚಿವರು ಹಾಗೂ ಶಾಸಕರು ವೈಯಕ್ತಿಕವಾಗಿ ಒಂದು ಲಕ್ಷ ರೂ.ಯನ್ನು ನೀಡಿದರು. ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಹಂಡಿಜೋಗಿ ಸಮುದಾಯದ ಕಲಾ ಆರಾಧಕರಾಗಿ ನಾಟಕಗಳ ಭಾಗವತರಾಗಿ ಸೇವೆ ಸಲ್ಲಿಸಿರುವ ದಳವಾಯಿ ಸಿದ್ದಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಮ್ಮ ತಾಲೂಕಿಗೆ ಕೀರ್ತಿ ಲಭಿಸಿದಂತಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ವೈಫಲ್ಯ, ವಂಚನೆಯನ್ನು ಬಿಎಸ್ವೈ ನೇತೃತ್ವದಲ್ಲಿ ಬಯಲಿಗೆಳೆಯುತ್ತೇವೆ: ಅಶ್ವತ್ಥನಾರಾಯಣ್