ಜೆಸಿಬಿ ಮೂಲಕ ಕಳಪೆ ರಸ್ತೆ ತೆರವು; ಲೋಕೋಪಯೋಗಿ ಅಧಿಕಾರಿಗಳಿಗೆ ಸಚಿವರಿಂದ ಕ್ಲಾಸ್! - ರಾಷ್ಟ್ರೀಯ ಹೆದ್ದಾರಿ 121ರ ರಸ್ತೆ ಕಾಮಗಾರಿ
🎬 Watch Now: Feature Video
ಪೌರಿ(ಉತ್ತರಾಖಂಡ): ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 121ರ ರಸ್ತೆ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು, ಕೂಡಲೇ ತೆರವುಗೊಳಿಸಿ ಹೊಸ ರಸ್ತೆ ನಿರ್ಮಾಣ ಮಾಡುವಂತೆ ಉತ್ತರಾಖಂಡ್ನ ಲೋಕೋಪಯೋಗಿ ಇಲಾಖೆ ಸಚಿವ ಸತ್ಪಾಲ್ ಮಹಾರಾಜ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಸುಮಾರು 10 ಮೀಟರ್‌ನಷ್ಟು ಹಾಳಾಗಿದ್ದ ರಸ್ತೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated : Feb 3, 2023, 8:35 PM IST