ಕುರುಬರೋ ನಾವು ಕುರುಬರೋ ಹಾಡಿಗೆ ಸಚಿವ ಎಂಟಿಬಿ ನಾಗರಾಜ್ ಮಸ್ತ್ ಡ್ಯಾನ್ಸ್ - ಸಚಿವ ಎಂಟಿಬಿ ನಾಗರಾಜ್ ಮಸ್ತ್ ಡ್ಯಾನ್ಸ್
🎬 Watch Now: Feature Video
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅತ್ತಿವಟ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಸಚಿವ ಎಂಟಿಬಿ ನಾಗರಾಜ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ಟೇಜ್ ಏರಿದ ಸಚಿವ ಎಂಟಿಬಿ ಅವರು ಕಲಾವಿದರ ಜತೆ ಕುರುಬರೋ ನಾವು ಕುರುಬರೋ ಎಂಬ ಹಾಡಿಗೆ ಟಪಾಂಗುಚ್ಚಿ ಸ್ಟೆಪ್ ಹಾಕಿ ರಂಜಿಸಿದ್ದಾರೆ. ಕೈಯಲ್ಲಿ ಕೋಲು ಮತ್ತು ಭುಜಕ್ಕೆ ಕಂಬಳಿ ಹಾಕಿಕೊಂಡು ಸಚಿವ ಎಂಟಿಬಿ ನಾಗರಾಜ್ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:38 PM IST