INS ವಿಕ್ರಾಂತ್‌ನಲ್ಲಿ ಮಿಗ್‌ 29ಕೆ ಯುದ್ಧ ವಿಮಾನ ನೈಟ್‌ ಲ್ಯಾಂಡಿಂಗ್‌: ವಿಡಿಯೋ - ಐಎನ್‌ಎಸ್ ವಿಕ್ರಾಂತ್‌

🎬 Watch Now: Feature Video

thumbnail

By

Published : May 26, 2023, 11:18 AM IST

ನವದೆಹಲಿ: ಮಿಗ್‌ 29ಕೆ ಯುದ್ಧ ವಿಮಾನವು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್‌ ವಿಕ್ರಾಂತ್‌ ಮೇಲೆ ಇದೇ ಮೊದಲ ಬಾರಿಗೆ ರಾತ್ರಿ ವೇಳೆಯಲ್ಲಿ ಇಳಿಯಿತು. ಭಾರತೀಯ ನೌಕಾಪಡೆ ಇದನ್ನು 'ಐತಿಹಾಸಿಕ ಮೈಲಿಗಲ್ಲು' ಎಂದು ಬಣ್ಣಿಸಿದೆ.

"ರಾತ್ರಿ ವೇಳೆ ಐಎನ್‌ಎಸ್‌ ವಿಕ್ರಾಂತ್‌ ಮೇಲೆ ಮಿಗ್‌ 29ಕೆ ಯುದ್ಧ ವಿಮಾನವನ್ನು ಇಳಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಪ್ರಾಯೋಗಿಕವಾಗಿ ನಡೆಸಿದ ಈ ಕಾರ್ಯದಲ್ಲಿ ಯಶಸ್ಸು ಸಿಕ್ಕಿದೆ. ಐಎನ್‌ಎಸ್‌ ವಿಕ್ರಾಂತ್‌ ಹಾಗೂ ನೌಕಾಪಡೆಯ ಪೈಲಟ್‌ಗಳ ವೃತ್ತಿಪರತೆ ಹಾಗೂ ಕೌಶಲಕ್ಕೆ ಇದು ಸಾಕ್ಷಿ" ಎಂದು ನೌಕಾಪಡೆ ಟ್ವೀಟ್​​ನಲ್ಲಿ ತಿಳಿಸಿದೆ.

"ಐಎನ್‌ಎಸ್‌ ವಿಕ್ರಾಂತ್‌ ಬುಧವಾರ ರಾತ್ರಿ ಅರಬ್ಬಿ ಸಮುದ್ರದಲ್ಲಿ ಸಾಗುತ್ತಿದ್ದಾಗ ಅದರ ಮೇಲೆ ಮಿಗ್‌–29ಕೆ ಇಳಿದಿದೆ. ಈ ಸಾಧನೆಯ ಮೂಲಕ ಭಾರತೀಯ ವಾಯುಪಡೆ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಇದು ವಾಯುಪಡೆಯು ಆತ್ಮನಿರ್ಭರ ಭಾರತದೆಡೆ ದಿಟ್ಟ ಹೆಜ್ಜೆ ಇಟ್ಟಿರುವುದರ ಧ್ಯೋತಕ" ಎಂದು ವಾಯುಪಡೆಯ ವಕ್ತಾರ ಕಮಾಂಡರ್‌ ವಿವೇಕ್‌ ಮಾಧವಾಲ್‌ ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ನಡೆಸಲಾಗಿದ್ದ ಪ್ರಾಯೋಗಿಕ ಪರೀಕ್ಷೆ ವೇಳೆ ರಷ್ಯಾ ಮೂಲದ ಮಿಗ್‌–29ಕೆ ಹಾಗೂ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್‌ ಲಘು ಯುದ್ಧ ವಿಮಾನ (ಎಲ್​ಸಿಎ) ಹಗಲು ಹೊತ್ತಿನಲ್ಲಿ ವಿಮಾನವಾಹಕ ಯುದ್ಧನೌಕೆಯ ಮೇಲೆ ಯಶಸ್ವಿಯಾಗಿ ಇಳಿದಿದ್ದವು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೌಕಾಪಡೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಈ ಗಮನಾರ್ಹ ಸಾಧನೆಯು ವಿಕ್ರಾಂತ್ ಸಿಬ್ಬಂದಿ ಮತ್ತು ನೌಕಾ ಪೈಲಟ್‌ಗಳ ಕೌಶಲ್ಯ, ಪರಿಶ್ರಮ ಮತ್ತು ವೃತ್ತಿಪರತೆಗೆ ಸಾಕ್ಷಿಯಾಗಿದೆ. ಅವರಿಗೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ.

ನೈಟ್‌ ಲ್ಯಾಂಡಿಂಗ್‌ ಎಂದರೆ?: ರಾತ್ರಿಯ ವೇಳೆ ಯುದ್ಧ ವಿಮಾನವನ್ನು ಯುದ್ಧ ನೌಕೆಯ ಮೇಲೆ ಯಶಸ್ವಿಯಾಗಿ ಇಳಿಸುವ ಪ್ರಕ್ರಿಯೆ. ನೌಕಾ ಪೈಲಟ್‌ಗಳ ಪಾಲಿಗೆ ಇದರಷ್ಟು ಸವಾಲಿನ ಸಂಗತಿ ಇನ್ನೊಂದಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ:  'ಹಾರಾಡುವ ಶವಪೆಟ್ಟಿಗೆ'! ತನಿಖೆ ಮುಗಿಯುವವರೆಗೆ ಮಿಗ್ 21 ಯುದ್ಧ ವಿಮಾನಗಳ ಹಾರಾಟವಿಲ್ಲ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.