ಧಾರವಾಹಿ ಶೂಟಿಂಗ್ ವೇಳೆ ಚಿರತೆಗಳ ಪ್ರವೇಶ!: ವಿಡಿಯೋ - ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತಾ
🎬 Watch Now: Feature Video
ಮುಂಬೈ (ಮಹಾರಾಷ್ಟ್ರ): ಇಲ್ಲಿನ ಗೋರ್ಗಾಂವ್ ಫಿಲ್ಮ್ ಸಿಟಿಗೆ ಚಿರತೆ ಹಾಗೂ ಚಿರತೆ ಮರಿ ನುಗ್ಗಿದ ಘಟನೆ ಬುಧವಾರ ನಡೆಯಿತು. ಮರಾಠಿ ಧಾರವಾಹಿಯ ಶೂಟಿಂಗ್ ನಡೆಯುತ್ತಿದ್ದ ಸೆಟ್ಗೆ ಚಿರತೆ ಎಂಟ್ರಿ ಕೊಟ್ಟಿದೆ. ಇದನ್ನು ಕಂಡು ಜನರು ಭಯಭೀತಗೊಂಡಿದ್ದಾರೆ.
ಅಖಿಲ ಭಾರತೀಯ ಸಿನಿ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತಾ ಪ್ರತಿಕ್ರಿಯಿಸಿ, "ಫಿಲ್ಮ್ ಸಿಟಿಗೆ ಚಿರತೆ ಹಾಗೂ ಚಿರತೆ ಮರಿ ನುಗ್ಗಿದೆ. ಸೆಟ್‌ನಲ್ಲಿ 200ಕ್ಕೂ ಹೆಚ್ಚು ಜನರಿದ್ದರು. ಕಳೆದ 10 ದಿನಗಳಲ್ಲಿ ಇದು ಮೂರನೇ ಪ್ರಕರಣ. ವನ್ಯಜೀವಿಗಳ ಉಪಟಳ ತಡೆಗೆ ಸರ್ಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಕೆಲವು ದಿನಗಳ ಹಿಂದಷ್ಟೇ ಇದೇ ಫಿಲ್ಮ್ ಸಿಟಿಗೆ ನುಗ್ಗಿದ ಚಿರತೆ ನಾಯಿಯೊಂದನ್ನು ಬೇಟೆಯಾಡಿತ್ತು. ಈ ಸಂದರ್ಭದಲ್ಲಿ ಅಂಜು ಎಂಬ ಧಾರವಾಹಿಯ ಶೂಟಿಂಗ್ ನಡೆಯುತ್ತಿತ್ತು. ಸುಮಾರು 200ಕ್ಕೂ ಹೆಚ್ಚು ಸೆಟ್ನಲ್ಲಿದ್ದರು. ಚಿರತೆ ದಾಳಿಗೆ ಬೆದರಿ ಕೆಲಕಾಲ ಶೂಟಿಂಗ್ ನಿಲ್ಲಿಸಲಾಗಿತ್ತು. ಚಿರತೆ ದಾಳಿ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ : ಫಿಲ್ಮ್‌ಸಿಟಿಗೆ ನುಗ್ಗಿ ನಾಯಿ ಬೇಟೆಯಾಡಿದ ಚಿರತೆ.. ವಿಡಿಯೋ