thumbnail

ನೆರೆ ನೀರು ದಾಟಿ ಮೆಸ್ಕಾಂ ಸಿಬ್ಬಂದಿಯಿಂದ ದುರಸ್ತಿ ಕಾರ್ಯ- ವಿಡಿಯೋ

By

Published : Jul 6, 2023, 7:03 AM IST

ಉಳ್ಳಾಲ (ಮಂಗಳೂರು) : ಸರ್ಕಾರಿ ಕರ್ತವ್ಯವಾದರೂ ನಿಭಾಯಿಸಲು ಛಲ ಬೇಕು. ಇದಕ್ಕೊಂದು ಹೊಸ ಉದಾಹರಣೆ ಸಿಕ್ಕಿದೆ. ಮೆಸ್ಕಾಂನ ಉಳ್ಳಾಲ-2 ಘಟಕದ ಪವರ್‌ಮೆನ್‌ಗಳಾದ ವಸಂತ್ ಹಾಗೂ ಸುರೇಶ್ ಎಂಬವರು ಗದ್ದೆಯೊಂದರಲ್ಲಿ ಕೃತಕ ನೆರೆಯಾಗಿದ್ದರೂ ಅದನ್ನು ಕಷ್ಟಪಟ್ಟು ದಾಟಿ 40 ಮನೆಗಳಿಗೆ ವಿದ್ಯುತ್ ಪೂರೈಸಿದ್ದಾರೆ. ಈ ಕುರಿತ ವಿಡಿಯೋವನ್ನು ಮೆಸ್ಕಾಂ ಜೆ.ಇ ನಿತೇಶ್ ಹೊಸಗದ್ದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮ್ಮ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಬೆಳ್ಮ ಗ್ರಾಮದ ಬೆರಿಕೆ ಎಂಬಲ್ಲಿ ಬಿರುಗಾಳಿ, ಮಳೆಗೆ ವಿದ್ಯುತ್ ಕಂಬದ ತಂತಿಗಳು ಪರಸ್ಪರ ಸ್ಪರ್ಶಿಸಿ ಸ್ಥಳೀಯ 40ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಗ್ರಾಮಸ್ಥರು ಮೆಸ್ಕಾಂಗೆ ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಗದ್ದೆಯಲ್ಲಿರುವ ನೆರೆ ನೀರು ಲೆಕ್ಕಿಸದೆ ಸ್ಥಳೀಯರೋರ್ವರ ಮಾರ್ಗದರ್ಶನದಿಂದ ನೀರಲ್ಲಿ ಒದ್ದೆಯಾಗಿಯೇ ಸಾಗಿ ಕಂಬವನ್ನೇರಿ ತುರ್ತು ದುರಸ್ತಿ ಕಾರ್ಯ ನಡೆಸಿದರು. ಹಲವು ವರ್ಷಗಳಿಂದ ಮೆಸ್ಕಾಂನಲ್ಲಿ ಸೇವೆ ಸಲ್ಲಿಸುತ್ತಿರುವ ವಸಂತ್ ಅವರ ಪ್ರಾಮಾಣಿಕ ಸೇವೆಯನ್ನು ಸಂಸ್ಥೆ ಹಾಗೂ ಸಾರ್ವಜನಿಕರು ಮೆಚ್ಚಿದ್ದಾರೆ.

ಇದನ್ನೂ ಓದಿ :  ಸುಳ್ಯದಲ್ಲಿ ಮೆಸ್ಕಾಂ ಭೂಗತ ಕೇಬಲ್ ಅಳವಡಿಕೆ; ಕಳಪೆ ಕಾಮಗಾರಿ ಆರೋಪ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.