ಮರಳು ಕಲೆಯಲ್ಲಿ ಅರಳಿದ ಗಮನ ಸೆಳೆಯುವ ಸಾಂತಾ ಕ್ಲಾಸ್: ಕ್ರಿಸ್​ಮಸ್​ ಶುಭಾಶಯ ಕೋರಿದ ಕಲಾವಿದರು - Christmas

🎬 Watch Now: Feature Video

thumbnail

By ETV Bharat Karnataka Team

Published : Dec 25, 2023, 11:34 AM IST

ಪುರಿ: ಇಂದು (ಶನಿವಾರ) ಇಡೀ ದೇಶದಲ್ಲಿ ಸಂಭ್ರಮದಿಂದ ಕ್ರಿಸ್​ಮಸ್​ ಆಚರಿಸಲಾಗುತ್ತಿದೆ.  ಈ ಸಂದರ್ಭದಲ್ಲಿ ಮರಳು ಕಲಾವಿದ ಪದ್ಮಶ್ರೀ ಸುದರ್ಶನ್ ಪಟ್ನಾಯಕ್ ಅವರು ಪುರಿ ಬ್ಲೂ ಫ್ಲಾಗ್ ಬೀಚ್‌ನಲ್ಲಿ ಬೃಹತ್ ಸಾಂತಾ ಕ್ಲಾಸ್​ ತಾತನ ಚಿತ್ರವನ್ನು ಮರಳು ಕಲೆ ಬಿಡಿಸುವ ಮೂಲಕ ಇಡೀ ದೇಶಕ್ಕೆ ಕ್ರಿಸ್​ಮಸ್​ ಹಬ್ಬದ ಶುಭಾಶಯ ಕೋರಿದ್ದಾರೆ.

ಈ ಮರಳು ಕಲೆಯನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಮಾಡಲಾಗಿದೆ. ಸುದರ್ಶನ್ ಅವರು, ಇದಕ್ಕಾಗಿ ಸುಮಾರು 2 ಟನ್ ಈರುಳ್ಳಿಯನ್ನು ಬಳಕೆ ಮಾಡಿದ್ದಾರೆ. ನೂರು ಅಡಿ ಉದ್ದದ ಸಾಂತಾ ಕ್ಲಾಸ್ ತಾತನ ಚಿತ್ರವನ್ನು ಮರಳಿನಲ್ಲಿ ಅರಳಿಸಿದ್ದಾರೆ. ಇದರ ಅಗಲ 40 ಅಡಿ ಮತ್ತು ಎತ್ತರ 20 ಅಡಿ ಇದೆ. ಇದನ್ನು ಸುದರ್ಶನ್ ಅವರು ಉತ್ತಮವಾಗಿ ನಿರ್ಮಿಸಿದ್ದಾರೆ. ಸುದರ್ಶನ್ ಅವರ ಈ ಬೃಹತ್ ಮರಳು ಕಲೆಯು ಭಾರತದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದಿದೆ. ವರ್ಲ್ಡ್ ಬುಕ್ಸ್ ಆಫ್ ರೆಕಾರ್ಡ್ಸ್ ಇಂಡಿಯಾದ ಮುಖ್ಯ ಸಂಪಾದಕರಾದ ಸುಷ್ಮಾ ನಾರ್ವೇಕರ್ ಮತ್ತು ಸಂಜಯ್ ಬಿಲಾಶ್ ನಾರ್ವೇಕರ್ ಅವರು ಬ್ಲೂ ಫ್ಲಾಗ್ ಬೀಚ್‌ಗೆ ಆಗಮಿಸಿ ಸುದರ್ಶನ್ ಅವರಿಗೆ ಪದಕ ಮತ್ತು ಪ್ರಮಾಣಪತ್ರಗಳನ್ನು ನೀಡಿದ್ದರು. ಈ ಮರಳು ಕಲೆಯನ್ನು ನೋಡಲು ಪ್ರವಾಸಿಗರು ಪುರಿ ಬ್ಲೂ ಫ್ಲಾಗ್ ಬೀಚ್‌ಗೆ ಭೇಟಿ ಕೊಡುತ್ತಿದ್ದಾರೆ.

ಮತ್ತೊಂದೆಡೆ ಪುರಿ ಸ್ಯಾಂಡ್ ಆರ್ಟ್ ಪಾರ್ಕ್‌ನಲ್ಲಿ ಖ್ಯಾತ ಮರಳು ಕಲಾವಿದ ಮಾನಸ್ ಸಾಹು ರಚಿಸಿದ ಮತ್ತೊಂದು ಮರಳು ಕಲೆ ಜನಮನ ಸೆಳೆಯುತ್ತಿದೆ. ತುಂಬಾ ಆಕರ್ಷಕವಾಗಿರುವ ಮರಳು ಕಲೆಯಲ್ಲಿ ಮರ ಉಳಿಸಿ ಎಂಬ ಸಂದೇಶವನ್ನೂ ರವಾನಿಸಲಾಗಿದೆ. ಕ್ರಿಸ್‌ಮಸ್‌ಗಾಗಿ ಸ್ಯಾಂಡ್ ಆರ್ಟ್ ಪಾರ್ಕ್‌ನಲ್ಲಿ ಜಾಗೃತಿ ಆಧಾರಿತ ವೈವಿಧ್ಯಮಯ ಮರಳು ಕಲೆಯನ್ನು ರಚಿಸಲಾಗಿದೆ. ಅಂತಾರಾಷ್ಟ್ರೀಯ ಮರಳು ಕಲಾವಿದ ಮಾನಸ್ ಸಾಹು ಅವರು ಮರಳು ಸಾಂತಾ ಕ್ಲಾಸ್​ ತಾತನನ್ನು ರಚಿಸಿದ್ದಾರೆ. ಸೇವ್ ಟ್ರೀ ಮತ್ತು ಮೇರಿ ಕ್ರಿಸ್‌ಮಸ್ ಮುಂತಾದ ಸಂದೇಶಗಳನ್ನು ಈ ಮರಳು ಕಲೆಯಲ್ಲಿ ಸೇರಿಸಿದ್ದಾರೆ. ಆದಾಗ್ಯೂ, ಪುರಿ ಲೈಟ್ ಹೌಸ್ ಬಳಿಯ ಸಮುದ್ರತೀರದಲ್ಲಿ ಇದನ್ನು ನಿರ್ಮಿಸಲಾಗಿದೆ. ಮಾನಸ್‌ ಅವರ ಜಾಗೃತಿ ಆಧಾರಿತ ಮರಳು ಕಲೆ ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ದೇಶದೆಲ್ಲೆಡೆ ಯೇಸುಕ್ರಿಸ್ತನ ಆರಾಧನೆ: ಮಧ್ಯರಾತ್ರಿಯಿಂದಲೇ ಸಂಭ್ರಮ; ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.