ಸಿದ್ದರಾಮಯ್ಯಗೆ ಆಶೀರ್ವಾದ ಮಾಡಲು ಕಾದು ಕುಳಿತ ತೃತೀಯಲಿಂಗಿ ಸಮುದಾಯ - ಈಟಿವಿ ಭಾರತ ಕನ್ನಡ
🎬 Watch Now: Feature Video
ಮೈಸೂರು: ಇಲ್ಲಿನ ಮತ ಎಣಿಕೆ ಕೇಂದ್ರದ ಹೊರಗೆ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಮತ್ತು ಆಶೀರ್ವಾದಕ್ಕಾಗಿ ತೃತೀಯಲಿಂಗಿ ಸಮುದಾಯದ ಸದಸ್ಯರು ಕಾದುಕುಳಿತಿದ್ದರು. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ತೃತೀಯಲಿಂಗಿ ಸಮುದಾಯದ ಚಾಂದಿನಿ ಹೇಳಿದ್ದಾರೆ.
ಕರ್ನಾಟಕದಲ್ಲಿ 1 ಲಕ್ಷ ತೃತೀಯ ಸಮುದಾಯದ ಜನ ಇದ್ದು ಎಲ್ಲಾರೂ ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಕಾಂಗ್ರೆಸ್ನಿಂದ ಎಲ್ಲರಿಗೂ ಒಳ್ಳೆಯದಾಗುವ ನಿರೀಕ್ಷೆ ಇದೆ. ಮಹಿಳೆಯರಿಗೆ ಸರ್ಕಾರ ನೀಡಿದ ಭರವಸೆ ಈಡೇರಿಸಲಿದೆ. ಅಡುಗೆ ಅನಿಲದ ದರ 500ಕ್ಕೆ ಇಳಿಕೆ ಆಗಲಿದೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಲಿದೆ. ಉಚಿತ ವಿದ್ಯುತ್ ನೀಡುವ ಭರವಸೆಯನ್ನೂ ಸರ್ಕಾರ ಈಡೇರಿಸಲಿದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ 10,000 ಮತ ನಮ್ಮ ಸಮುದಾಯದಿಂದ ಹಾಕಿದ್ದಾರೆ. ಚಾಮರಾಜನಗರ ಕ್ಷೇತ್ರದ ಹರೀಶ್ ಗೌಡ ಅವರಿಗೂ ಮತಹಾಕಿಸಿದ್ದೇವೆ. ನಾವು ಇಲ್ಲಿ ನಾಲ್ವರು ಗೆದ್ದ ಅಭ್ಯರ್ಥಿಗಳಿಗಾಗಿ ಅವರಿಗೆ ಧನ್ಯವಾದ ತಿಳಿಸಲು ಇಲ್ಲಿಗೆ ಬಂದಿದ್ದೇವೆ ಎಂದು ಚಾಂದಿನಿ ಹೇಳುತ್ತಾರೆ. ಅಲ್ಲಿ ಸೇರಿದ್ದ ತೃತೀಯಲಿಂಗಿ ಸಮುದಾಯದ ಸದಸ್ಯರು ಸಿದ್ದರಾಮಯ್ಯ ಅವರಿಗೆ ಈ ವೇಳೆ ಜೈಕಾರ ಹಾಕಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಈ ಅಂಶಗಳು ಕಾರಣವೇ?