ಸುರಂಗದಿಂದ ರಕ್ಷಿಸಲಾದ 41 ಕಾರ್ಮಿಕರ ಆರೋಗ್ಯ ಹೇಗಿದೆ: ಇಲ್ಲಿದೆ ಕಾರ್ಯಾಚರಣೆಯ ಆರೋಗ್ಯಾಧಿಕಾರಿ ಮಾಹಿತಿ - Medical checkup of 41 workers
🎬 Watch Now: Feature Video
Published : Nov 29, 2023, 1:19 PM IST
ಚಿನ್ಯಾಲಿಸೌರ್ (ಉತ್ತರಾಖಂಡ): ಚಿನ್ಯಾಲಿಸೌರ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿರುವ 41 ಕಾರ್ಮಿಕರು ಆರೋಗ್ಯವಾಗಿದ್ದಾರೆ. ರಕ್ಷಣೆಯ ನಂತರ ಅವರ ಆರೋಗ್ಯ ತಪಾಸಣೆಯನ್ನು ಎರಡು ಬಾರಿ ಮಾಡಲಾಗಿದೆ. ಎಲ್ಲರನ್ನೂ ರಿಷಿಕೇಶದ ಏಮ್ಸ್ಗೆ ಕಳುಹಿಸಲು ಸಿದ್ಧತೆ ನಡೆಸಲಾಗಿದ್ದು, ಚಿನೂಕ್ ಹೆಲಿಕಾಪ್ಟರ್ ಮೂಲಕ ಎಲ್ಲರನ್ನೂ ರವಾನೆ ಮಾಡಲಾಗುವುದು ಎಂದು ಉತ್ತರಾಖಂಡ್‌ನ ಸಿಲ್ಕ್ಯಾರಾ ರಕ್ಷಣಾ ಕಾರ್ಯಾಚರಣೆಯ ನೋಡಲ್ ಅಧಿಕಾರಿ ಡಾ. ಬಿಮ್ಲೇಶ್ ಜೋಶಿ ಮಾಹಿತಿ ನೀಡಿದರು.
"ಚಿನ್ಯಾಲಿಸೌರ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 18 ವೈದ್ಯರ ತಂಡವು ಕಳೆದ ರಾತ್ರಿಯಿಂದ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಈ ಪೈಕಿ 10 ಮಂದಿ ಜಿಡಿಎಂಒಗಳು, ಉಳಿದ 8 ಜನ ತಜ್ಞರು, ಇದರಲ್ಲಿ ಎಲ್ಲಾ ರೀತಿಯ ತಜ್ಞರು ಸೇರಿದ್ದಾರೆ. ಇದಲ್ಲದೇ ಅರೆವೈದ್ಯಕೀಯ ಸಿಬ್ಬಂದಿ ಇದ್ದು, ಒಟ್ಟು 50 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ರಾತ್ರಿಯಿಂದ ಎಲ್ಲಾ 41 ಕಾರ್ಮಿಕರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಪನ್ನೀರ್, ಬೇಯಿಸಿದ ಮೊಟ್ಟೆ, ಖೀರ್, ರೊಟ್ಟಿ, ತರಕಾರಿಗಳು ಮತ್ತು ಅನ್ನ ಸೇರಿದಂತೆ ಸಮತೋಲಿತ ಆಹಾರವನ್ನು ನೀಡಲಾಗಿದೆ" ಎಂದು ಡಾ. ಬಿಮ್ಲೇಶ್ ಜೋಶಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 17 ದಿನಗಳ ಬಳಿಕ ಕಾರ್ಮಿಕರು ಸುರಂಗದಿಂದ ಒಬ್ಬೊಬ್ಬರಾಗಿ ಹೊರಬಂದ ದೃಶ್ಯ- ನೋಡಿ