ಮುಂಬೈ ಪಂಚತಾರಾ ಟ್ರೈಡೆಂಟ್‌ ಹೊಟೇಲಿನ ಮೇಲೆ ಬೆಂಕಿ ಇಲ್ಲದ ಹೊಗೆ: ವಿಡಿಯೋ

By

Published : Jun 18, 2023, 11:18 AM IST

Updated : Jun 18, 2023, 12:00 PM IST

thumbnail

ಮುಂಬೈ: ಇಲ್ಲಿನ ನಾರಿಮನ್ ಪಾಯಿಂಟ್‌ನಲ್ಲಿರುವ ಪ್ರಸಿದ್ಧ ಬಹುಅಂತಸ್ತಿನ ಟ್ರೈಡೆಂಟ್ ಹೋಟೆಲ್ ಕಟ್ಟಡದಲ್ಲಿ ಇಂದು ಬೆಳಗ್ಗೆ (ಭಾನುವಾರ) ದಟ್ಟ ಹೊಗೆ ಕಾಣಿಸಿಕೊಂಡಿತು. ಇದು ಮೊದಲು ಬೆಂಕಿ ಅವಘಡ ಎಂದೇ ಭಾವಿಸಲಾಗಿತ್ತು. ಆದರೆ, ಪರಿಶೀಲನೆಯ ಬಳಿಕ ಹೋಟೆಲ್​ನ ಬಾಯ್ಲರ್​ನಿಂದ ಬಂದ ಹೊಗೆಯಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕಟ್ಟಡಕ್ಕೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.

ಮುಂಬೈನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಮರೈನ್ ಡ್ರೈವ್‌ ಪ್ರದೇಶದಲ್ಲಿ ಈ ಹೋಟೆಲ್ ಇದೆ. ಇಲ್ಲಿಗೆ ಅನೇಕ ಪ್ರವಾಸಿಗರು ವಾಯು ವಿಹಾರಕ್ಕೆ ಬರುತ್ತಾರೆ. ಬೆಳಗ್ಗೆ ಹೋಟೆಲ್​ನ ಮೇಲಂತಸ್ತಿನ ಭಾಗದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದನ್ನು ಕಂಡ ಜನರು ಹೋಟೆಲ್​ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕಟ್ಟಡದಲ್ಲಿ ಬೆಂಕಿ ಬಿದ್ದಿದೆ ಎಂದು ಭಾವಿಸಿದ್ದ ಆಡಳಿತ ಮಂಡಳಿ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿ ಕರೆಸಿದ್ದರು.

ತಪಾಸಣೆ ನಡೆಸಿದ ಬಳಿಕ ಇದು ಬೆಂಕಿಯಿಂದ ಬಂದ ಹೊಗೆಯಲ್ಲ, ಬಾಯ್ಲರ್​ನಲ್ಲಿನ ನೀರು ಅತಿ ಬಿಸಿಯಾಗಿ ಹೊಗೆ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದರು. ಇದರಿಂದ ಪಂಚತಾರಾ ಹೋಟೆಲ್​ನಲ್ಲಿ ಉಂಟಾಗಿದ್ದ ಬೆಂಕಿಯ ಆತಂಕ ದೂರವಾಯಿತು.

ಮುಂಬೈನ ನಾರಿಮನ್ ಪಾಯಿಂಟ್ ಬಹುಮುಖ್ಯ ಪ್ರದೇಶವಾಗಿದ್ದು, ಇಲ್ಲಿ ಸರ್ಕಾರದ ಸಚಿವಾಲಯವಿದೆ. ವಿಧಾನಸೌಧವೂ ಇಲ್ಲೇ ಇದೆ. ಹೀಗಾಗಿ ರಾಜ್ಯದ ಮೂಲೆ ಮೂಲೆಯಿಂದ ಅಧಿಕಾರಿಗಳು, ನೌಕರರು, ಜನಸಾಮಾನ್ಯರು ಇಲ್ಲಿಗೆ ಬರುತ್ತಾರೆ. ಈ ಪ್ರದೇಶ ಯಾವಾಗಲೂ ಜನನಿಬಿಡವಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್​ನಲ್ಲಿ ಬಸ್​ ಅಪಘಾತ: 15 ಮಂದಿ ಪ್ರಯಾಣಿಕರಿಗೆ ಗಾಯ

Last Updated : Jun 18, 2023, 12:00 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.