ಸ್ಕೂಟಿಯೊಳಗೆ ಬೃಹತ್ ಹೆಬ್ಬಾವು ಪತ್ತೆ.. ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ! - ಭರತ್‌ಪುರ ಜಿಲ್ಲೆಯ ಮನೇಂದ್ರಗಢ
🎬 Watch Now: Feature Video
ಛತ್ತೀಸ್ಗಢ ಚಿರ್ಮಿರಿ - ಭರತ್‌ಪುರ ಜಿಲ್ಲೆಯ ಮನೇಂದ್ರಗಢದಲ್ಲಿ ಸ್ಕೂಟಿಯೊಳಗೆ ಬೃಹತ್ ಹೆಬ್ಬಾವು ಸುತ್ತಿಕೊಂಡಿರುವುದು ಕಂಡುಬಂದಿದೆ. ಇಲ್ಲಿನ ಮನೆಯೊಂದರ ಹೊರಗೆ ನಿಲ್ಲಿಸಿದ್ದ ಸ್ಕೂಟಿಗೆ ಹೆಬ್ಬಾವು ನುಗ್ಗಿತ್ತು. ಗಾಬರಿಗೊಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಕೂಟಿಯೊಳಗೆ ಹೊಕ್ಕಿದ್ದ ಹೆಬ್ಬಾವು ಹೊರತೆಗೆಯಲು ರಕ್ಷಣಾ ತಂಡ ಸ್ಕೂಟಿ ಕೆಡವಬೇಕಾಯಿತು. ಗಂಟೆಗಳ ಶ್ರಮದ ನಂತರ ಹಾವನ್ನು ಕಾಡಿನಲ್ಲಿ ಬಿಡಲಾಯಿತು. ಮನೇಂದ್ರಗಢ ಅರಣ್ಯ ಪ್ರದೇಶವಾಗಿರುವುದರಿಂದ ಅಲ್ಲಿಗೆ ಚಿರತೆ, ಕರಡಿ, ಆನೆ, ಹೆಬ್ಬಾವುಗಳು ಆಗಾಗ ಭೇಟಿ ನೀಡುತ್ತಿರುತ್ತವೆ.
Last Updated : Feb 3, 2023, 8:35 PM IST