ಮಾರಮ್ಮ ಜಾತ್ರಾ ಮಹೋತ್ಸವ: 18 ಅಡಿ ಉದ್ಧದ ಸರಳುಗಳನ್ನು ಬಾಯಿಗೆ ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ - ಭಕ್ತಿ ಪರಾಕಾಷ್ಠೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17995761-thumbnail-4x3-sanju.jpg)
ಚಾಮರಾಜನಗರ : ರಾಜ್ಯದಲ್ಲಿ ಈಗ ಜಾತ್ರೆಗಳ ಸಮಯ. ಹಲವು ಭಕ್ತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಯಾ ಗ್ರಾಮದ ದೇವತೆಗಳಲ್ಲಿ ಹರಕೆ ಹೊತ್ತಿರುತ್ತಾರೆ. ಅದನ್ನು ಜಾತ್ರೆಯ ವೇಳೆ ಭಕ್ತಿಯ ಪರಾಕಾಷ್ಠೆ ಮೆರೆಯುವ ಮೂಲಕ ತೀರಿಸುವ ವಾಡಿಕೆ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದೇ ರೀತಿ ಒಂದಲ್ಲ ಎರಡಲ್ಲ ಬರೋಬ್ಬರಿ 18-20 ಅಡಿ ಉದ್ದದ ಕಬ್ಬಿಣದ ಸರಳುಗಳ ಮೂಲಕ ಬಾಯಿಗೆ ಬೀಗ ಹಾಕಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ.
ಹನೂರಿನಲ್ಲಿ ನಡೆಯುತ್ತಿರುವ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು 90ಕ್ಕೂ ಹೆಚ್ಚು ಮಂದಿ ಬಾಯಿಗೆ ಉದ್ದುದ್ದ ಸರಳುಗಳನ್ನು ಚುಚ್ಚಿಕೊಂಡು ಕಿ.ಮೀಗಟ್ಟಲೇ ಮೆರವಣಿಗೆ ನಡೆಸಿ ಮಾರಮ್ಮನಿಗೆ ಭಕ್ತಿ ಸಮರ್ಪಿಸಿದ್ದಾರೆ. ಭಕ್ತರ ಈ ರೀತಿಯ ಪರಾಕಾಷ್ಠೆಯನ್ನು ನೋಡಲು ಬೇರೆ ಬೇರೆ ಜಿಲ್ಲೆ, ತಾಲೂಕು ಹಾಗೂ ಹಳ್ಳಿಗಳ ಜನ ಬಂದು ಸೇರುತ್ತಾರೆ. ಅಲ್ಲದೇ, ಜಾತ್ರೆಯ ವೇಳೆ ನಡೆಯುವ ಅಚ್ಚರಿಯ ಕ್ಷಣಗಳಿಗೆ ಸಾಕ್ಷಿಯಾಗುತ್ತಾರೆ.
ಇದನ್ನೂ ಓದಿ : ಸಿಗರೇಟಿನ ಆರತಿ, ಮತ್ತೇರುವ ಮದ್ಯವೇ ಈ ದೇವರಿಗೆ ನೈವೇದ್ಯ! ಇದು ಕಾರವಾರದ ಖಾಪ್ರಿ ಜಾತ್ರೆ