ಮಂಡ್ಯ: ಬೈಕ್ ಮೇಲೆ ಮರ ಬಿದ್ದು ಪೌರಕಾರ್ಮಿಕ ಸಾವು - etv bharat karnataka
🎬 Watch Now: Feature Video
ಮಂಡ್ಯ: ರಸ್ತೆ ಬದಿ ಒಣಗಿ ನಿಂತಿದ್ದ ಮರ ಉರುಳಿ ಪೌರಕಾರ್ಮಿಕ ಸಾವನ್ನಪ್ಪಿರುವ ಘಟನೆ ನಗರದ ತಾವರೆಗೆರೆಯ ಚಲುವಯ್ಯ ಉದ್ಯಾನವನದ ಬಳಿ ನಡೆಯಿತು. 15 ವರ್ಷಗಳಿಂದ ಮಂಡ್ಯ ನಗರಸಭೆಯಲ್ಲಿ ಪೌರಕಾರ್ಮಿಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉದಯ್ ಕುಮಾರ್ (31) ಮೃತಪಟ್ಟಿದ್ದಾರೆ. ಮಗನ ಹುಟ್ಟುಹಬ್ಬಕ್ಕೆ ಉಡುಗೊರೆ ಖರೀದಿಸಲು ಗುರುವಾರ ರಾತ್ರಿ 9 ಗಂಟೆಗೆ ಹೊರಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಪತ್ನಿ, ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಮರ ತೆರವಿಗೆ ನಗರಸಭೆಗೆ ಪತ್ರ ಬರೆದಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಲಾಗಿದೆ. ಮಂಡ್ಯ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೌರಕಾರ್ಮಿಕರ ಸಂಘದವರು ನಗರಸಭೆ, ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಮೃತನ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪೊಲೀಸರ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ ದರೋಡೆ: ಬೆಂಗಳೂರಲ್ಲಿ ಮೂವರು ಆರೋಪಿಗಳ ಬಂಧನ