ಫೋಟೋ ತೆಗೆದುಕೊಳ್ಳಲು ವಂದೇ ಭಾರತ್ ರೈಲು ಹತ್ತಿ ಒಳಗೆ ಸಿಲುಕಿಕೊಂಡ ವ್ಯಕ್ತಿ.. ವಿಡಿಯೋ ವೈರಲ್ - ಈಟಿವಿ ಭಾರತ ಕನ್ನಡ
🎬 Watch Now: Feature Video

ರಾಜಮಂಡ್ರಿ/ಆಂಧ್ರಪ್ರದೇಶ: ಫೋಟೋ ತೆಗೆದುಕೊಳ್ಳಲೆಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನೊಳಗಡೆ ಹತ್ತಿದ ವ್ಯಕ್ತಿ ಅದರಲ್ಲೇ ಸಿಲುಕಿರು ಘಟನೆ ನಡೆದಿದೆ. ರೈಲು ನಿರ್ಗಮಿಸುವ ಹಂತದಲ್ಲಿರುವಾಗ ವ್ಯಕ್ತಿಯೊಬ್ಬರು, ವಂದೇ ಭಾರತ್ ಟ್ರೈನ್ ಕೋಚ್ನ ಒಳಗೆ ಹೋಗಿ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಅವರು ಹತ್ತಿದ ಕೆಲವೇ ಕ್ಷಣದಲ್ಲಿ ರೈಲಿನ ಬಾಗಿಲುಗಳು ಮಚ್ಚಿಕೊಂಡು ಅಲ್ಲಿಂದ ರೈಲು ಚಲಿಸಲು ಮುಂದಾಗಿದೆ.
ಇದರಿಂದ ಹೊರ ಬರಲು ಆಗದೇ ಆ ವ್ಯಕ್ತಿ ಅದರಲ್ಲೇ ಸಿಲುಕಿ ಪರದಾಡಿದ್ದಾರೆ. ಅಲ್ಲದೇ ಟಿಸಿ ಅವರಿಗೆ ಟ್ರೈನ್ ನಿಲ್ಲಿಸುವಂತೆ ಬೇಡಿಕೊಂಡಿದ್ದಾರೆ. ಇದು ವಿಜಯವಾಡದ ವರೆಗೆ ಎಲ್ಲಿಯೂ ನಿಲ್ಲುವುದಿಲ್ಲ ಎಂದು ಟಿಸಿ ತಿಳಿಸಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ವಿಮಾನದ ತುರ್ತು ಬಾಗಿಲು ತೆರೆದ ಪಕ್ಷವೊಂದಕ್ಕೆ ಸೇರಿದ ಪ್ರಯಾಣಿಕ.. ತಮಿಳುನಾಡು ಸಚಿವರ ಆರೋಪ