ನಾಗರ ಹಾವನ್ನು ಕೊರಳಿಗೆ ಸುತ್ತಿಕೊಂಡು ಚುನಾವಣೆ ಭವಿಷ್ಯ ನುಡಿದ ವ್ಯಕ್ತಿ!- ವಿಡಿಯೋ - man holding snake in raichuru
🎬 Watch Now: Feature Video

ರಾಯಚೂರು : ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮೊದಲೇ ರಾಯಚೂರು ಜಿಲ್ಲೆಯಲ್ಲಿ ಚುನಾವಣೆಯ ಕಾವು ಜೋರಾಗಿದೆ. ಜಿಲ್ಲೆಯ ಕ್ಷೇತ್ರವೊಂದರಲ್ಲಿ ಇಂತಹ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ವ್ಯಕ್ತಿಯೊಬ್ಬ ವಿಷ ಸರ್ಪದೊಂದಿಗೆ ಭವಿಷ್ಯ ಹೇಳುತ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೇವದುರ್ಗ ಕ್ಷೇತ್ರವನ್ನು ಜಿದ್ದಾಜಿದ್ದಿನ ಕಣವೆಂದೇ ಹೇಳಲಾಗುತ್ತಿದೆ. ಚುನಾವಣೆಗೂ ಇನ್ನೂ ಮೂರು ತಿಂಗಳಿದೆ. ಆದರೆ ಇಲ್ಲೊಬ್ಬ ಇಂತಹ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ನಾಗರಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಮತ ಭವಿಷ್ಯ ಹೇಳಿದ್ದಾನೆ. ದೇವದುರ್ಗ ತಾಲೂಕಿನ ಸಮುದ್ರ ತಾಂಡಾದಲ್ಲಿ ಈ ಘಟನೆ ನಡೆದಿದೆ.
Last Updated : Feb 3, 2023, 8:40 PM IST