ಗಂಗಾವತಿಯಲ್ಲಿ ಮಾಜಿ ಸಚಿವರ ತೋಟದಲ್ಲಿ ಗಂಡು ಚಿರತೆ ಸೆರೆ- ವಿಡಿಯೋ

🎬 Watch Now: Feature Video

thumbnail

By

Published : Jun 18, 2023, 11:33 AM IST

ಗಂಗಾವತಿ : ಗಂಗಾವತಿ ಮುಖ್ಯರಸ್ತೆಯ ಪಕ್ಕದಲ್ಲಿ ಇರುವ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ಬೆಣಕಲ್ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇಂದು ಬೆಳಗಿನ ಜಾವ ಒಂದೂವರೆ ವರ್ಷದ ಗಂಡು ಚಿರತೆ ಸೆರೆಯಾಗಿದೆ.

ಇದನ್ನೂ ಓದಿ : Leopard carrying a dead deer : ಜಿಂಕೆಯನ್ನು ತಿನ್ನಲು ಎಳೆದೊಯ್ದ ಚಿರತೆ - ವಿಡಿಯೋ

ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವ ಬಗ್ಗೆ ಜನರಿಂದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟಿದ್ದರು. ಸೆರೆ ಸಿಕ್ಕ ಚಿರತೆ ಆರೋಗ್ಯವಾಗಿದೆ. ಬೇಟೆ ಅರಸಿ ಬಂದಿದ್ದು ನಾಯಿ ಮೇಲೆ ದಾಳಿ ಮಾಡುವ ರಭಸದಲ್ಲಿ ಬೋನಿಗೆ ಬಿದ್ದಿದೆ. ಬೋನು ಸಮೇತ ಚಿರತೆಯನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ.  

ಇದನ್ನೂ ಓದಿ : ಚಿರತೆಯೊಂದಿಗೆ ಹೋರಾಡಿ ಮಾಲೀಕನ ಪ್ರಾಣ ಉಳಿಸಿದ ' ಪುಣ್ಯಕೋಟಿ ' ; ಚಿರತೆ ಹಿಮ್ಮೆಟ್ಟಿಸಲು ಹಸುವಿಗೆ ಸಾಥ್ ಕೊಟ್ಟ ಶ್ವಾನ !

ಇದೇ ತಿಂಗಳ ಜೂನ್​ 9 ರಂದು ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಚಿರತೆಯೊಂದು ಸತ್ತಿರುವ ಬೃಹತ್​ ಜಿಂಕೆಯನ್ನು ತಿನ್ನಲು ಎಳೆದೊಯ್ಯುತ್ತಿರುವ  ದೃಶ್ಯ ಸೆರೆಯಾಗಿತ್ತು. ಹೆಚ್.ಡಿ.ಕೋಟೆ ಬಳಿ ಇರುವ ನಾಗರಹೊಳೆ ಹುಲಿ ಅಭಯಾರಣ್ಯ ವ್ಯಾಪ್ತಿಯ ಕುಟ್ಟ ಎಂಬಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರು, ತನ್ನಷ್ಟೇ ದೊಡ್ಡದಾಗಿರುವ ಜಿಂಕೆಯನ್ನು ತಿನ್ನಲು ಎಳೆದುಕೊಂಡು ಹೋಗುತ್ತಿರುವ ಚಿರತೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು. ​

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.