ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬಸ್ ಡ್ರೈವರ್ ಸಮಯ ಪ್ರಜ್ಞೆಯಿಂದ ತಪ್ಪಿದ ಅವಘಡ - ವಿಡಿಯೋ
🎬 Watch Now: Feature Video
ಮಂಡ್ಯ: ಸಾರಿಗೆ ಸಂಸ್ಥೆಯ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅವಘಡವೊಂದು ತಪ್ಪಿದ್ದು ಹತ್ತಾರು ಪ್ರಯಾಣಿಕರ ಜೀವಗಳು ಬದುಕುಳಿದ ಘಟನೆ ಮೈಸೂರು ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗೇಟ್ ಬಳಿ ಆಶ್ಚರ್ಯಕರ ರೀತಿಯಲ್ಲಿ ಅನಾಹುತ ತಪ್ಪಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ಮೂಲಕ ಟಿಪ್ಪರ್ ಲಾರಿಯೊಂದು ಅಡ್ಡ ಬಂದಿದ್ದು ಇನ್ನೇನು ಲಾರಿಗೆ ಬಸ್ ಡಿಕ್ಕಿಯಾಗಬೇಕಿತ್ತು. ಅಷ್ಟರಲ್ಲೇ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲಿ ಈ ಅವಘಡ ತಪ್ಪಿದೆ. ಹೆದ್ದಾರಿಯ ಅಂಡರ್ ಪಾಸ್ಗಳ ಬಳಿ ಇದ್ದ ರಸ್ತೆ ಉಬ್ಬು ತೆರವು ಮಾಡಿದ್ದರಿಂದ ಇಂತಹ ಅನಾಹುತಕ್ಕೆ ಆಹ್ವಾನ ನೀಡಿದಂತಾಗುತ್ತಿದೆ. ಲಾರಿ ಅಡ್ಡ ಬರುತ್ತಿದ್ದಂತೆ ಬಸ್ ಚಾಲಕ ಜಾಗರೂಕನಾಗಿ ಎಡಕ್ಕೆ ತಿರುಗಿಸಿ ಅನಾಹುತ ತಪ್ಪಿಸಿದ್ದಾರೆ. ಉಬ್ಬು ತೆಗೆಸಿದ್ದರಿಂದ ವಾಹನಗಳು ವೇಗವಾಗಿ ಚಲಿಸುತ್ತವೆ. ಅಪಘಾತ ಕೂಡ ಸಂಭವಿಸಬಹುದು. ಹಾಗಾಗಿ ಅಂಡರ್ ಪಾಸ್ಗಳ ಸಮೀಪ ರಸ್ತೆ ಉಬ್ಬು ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕಾರು ಸುಟ್ಟು ಕರಕಲು: ವಿಡಿಯೋ