ಬಾಲಾಜಿ ದೇವಸ್ಥಾನದಲ್ಲಿ 2700 ಕೆಜಿ ದೈತ್ಯ ರೊಟ್ಟಿ ತಯಾರು: ಕಾಲು ಲಕ್ಷ ಭಕ್ತರಿಗೆ ಇದೇ ಮಹಾಪ್ರಸಾದ - Roti prepared by devotees
🎬 Watch Now: Feature Video
ರಾಜಸ್ಥಾನ (ಜೈಪುರ): ರಾಜಸ್ಥಾನದ ಸಿಕಾರ್‌ನಲ್ಲಿರುವ ಪ್ರಸಿದ್ಧ ಸಿದ್ಧ ಪೀಠ ಬಾಲಾಜಿ ದೇವಸ್ಥಾನದಲ್ಲಿ ಹಬ್ಬದ ನಿಮಿತ್ತ 2,700 ಕೆಜಿಯ ಬೃಹತ್ ರೊಟ್ಟಿಯೊಂದನ್ನು ತಯಾರಿಸಲಾಗುತ್ತಿದೆ. ವಿಶೇಷವಾಗಿ ನಿರ್ಮಿಸಿದ ಒಲೆಯಲ್ಲಿ ರೊಟ್ಟಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ರುಚಿಕರವಾದ ರೊಟ್ಟಿಯನ್ನು ತಂದೂರ್ ರೋಟಿ ಶೈಲಿಯಲ್ಲಿ ತಯಾರಿಸಲಾಗುತ್ತದೆ. ಒಲೆಗೆ ಬೇಕಾದ ಬೆಂಕಿ ಮತ್ತು ಕಟ್ಟಿಗೆಯನ್ನು ಸಣ್ಣ ಜೆಸಿಬಿ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಹಬ್ಬದ ನಿಮಿತ್ತ ದೇವಸ್ಥಾನದತ್ತ ಭಕ್ತರ ದಂಡು ಹರಿದು ಬರುತ್ತಿದೆ. 2,700 ಕೆಜಿಯ ಈ ರೊಟ್ಟಿಯನ್ನು ಮಹಾಭೋಗವೆಂದು ಕರೆಯಲಾಗುತ್ತಿದ್ದು 25 ಸಾವಿರ ಭಕ್ತರಿಗೆ ಮಹಾಪ್ರಸಾದವಾಗಿ ಇದನ್ನು ಹಂಚಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಸಿಬ್ಬಂದಿ ತಿಳಿಸಿದೆ.
ಜೋಧಪುರದ ಪಂಡಿತ್ ರಾಮದಾಸ್ ಜಿ ಹಾಗೂ ಮಹಾರಾಜ್ ಪುನ್ಸರ್ ಬಾಪ್ ಜಿ ಎಂಬುವರು ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ರೊಟ್ಟಿಯನ್ನು ಬೇಯಿಸಿದ ಬಳಿಕ ಭಕ್ತರಿಗೆ ಹಂಚಲಾಗುತ್ತದೆ. ಮಹಾಭೋಗ್ ಎಂದರೆ ಇಡೀ ಗ್ರಾಮದ ಸಮೃದ್ಧಿ ಎಂದರ್ಥ. ಬೆಳಗ್ಗೆಯಿಂದಲೇ ಇದನ್ನು ಸಿದ್ಧಪಡಿಸಲಾಗುತ್ತಿದೆ. ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಾಲಾಜಿ ದೇವಸ್ಥಾನದ ಮಹಂತ್ ಓಂ ಪ್ರಕಾಶ್ ಶರ್ಮಾ ಹೇಳುತ್ತಾರೆ. ರೊಟ್ಟಿ ಬೇಯಿಸಲು ಕ್ರೇನ್ ಹಾಗೂ ಜೆಸಿಬಿ ಬಳಸಲಾಗಿದ್ದು, ಅದರ ವಿಡಿಯೋ ಜಾಲತಾಣದಲ್ಲಿ ಜಾಗ ಪಡೆದಿದೆ. ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದ್ದು, ಕ್ರೇನ್ ಅಲ್ಲದೇ ಸುಮಾರು 20 ಅಡುಗೆಯವರು ಈ ರೊಟ್ಟಿ ತಯಾರಿಕೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ರಾಯಚೂರು: ಶಾಲಾ ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ.. ಆಹಾರ ಸೇವಿಸಿದ 70 ಮಕ್ಕಳು ಅಸ್ವಸ್ಥ