ಲೋಕಾಯುಕ್ತ ದಾಳಿ: ₹20 ಸಾವಿರ ಲಂಚ, ಸಿಕ್ಕಿಬಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ - ಹನುಮಂತ ನಗರ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ

🎬 Watch Now: Feature Video

thumbnail

By ETV Bharat Karnataka Team

Published : Oct 4, 2023, 10:26 PM IST

ಬೆಂಗಳೂರು : ಲಂಚ ಪಡೆಯುವ ವೇಳೆ ಹನುಮಂತ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಕವಿನ್ ಬಂಧಿತ ಅಧಿಕಾರಿ. ಇವರನ್ನು ತನಿಖಾಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.    

ಇದನ್ನೂ ಓದಿ : ಬೆಂಗಳೂರು: ಖರ್ಚಿಗೆ ಕಾಸಿಲ್ಲವೆಂದು ಮೊಬೈಲ್ ಶಾಪ್​ ದೋಚಿದ್ದ ಯುವಕರ ಬಂಧನ

ವಾಹನ ಬಿಡುಗಡೆ ಮಾಡಲು ಶಿವಕುಮಾರ್ ಎಂಬವರ ಬಳಿ ಇವರು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶಿವಕುಮಾರ್​ ಲೋಕಾಯಕ್ತಕ್ಕೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡು ಹೆಡ್ ಕಾನ್‌ಸ್ಟೇಬಲ್ ಕವಿನ್ 20 ಸಾವಿರ ರೂ. ಲಂಚ ಪಡೆಯುವಾಗ ವೇಳೆ ರೆಡ್​ ಹ್ಯಾಂಡ್​ ಆಗಿ ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ ಎಂದು ಲೋಕಾಯುಕ್ತ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.   

ಇದನ್ನೂ ಓದಿ : ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಹಾಕಿ ₹16 ಕೋಟಿ ವಂಚನೆ: ಓರ್ವನ ಬಂಧನ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.