ತೋಟದ ಮನೆಗೆ ನುಗ್ಗಿದ್ದ ಚಿರತೆಯನ್ನು ಕೂಡಿಹಾಕಿದ ಗ್ರಾಮಸ್ಥರು - ಚಿರತೆಯನ್ನು ಕೂಡಿಹಾಕಿದ ಗ್ರಾಮಸ್ಥರು

🎬 Watch Now: Feature Video

thumbnail

By

Published : Feb 9, 2023, 1:28 PM IST

Updated : Feb 14, 2023, 11:34 AM IST

ಮಂಡ್ಯ: ಚಿರತೆಯೊಂದು ತೋಟದ ಮನೆಗೆ ನುಗ್ಗಿದ್ದಲ್ಲದೇ ಅಲ್ಲಿಯೇ ಅವಿತು ಕುಳಿತಿರುವ ಘಟನೆ ಕೆಆರ್ ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿಂಗೇಗೌಡರು ಎನ್ನುವವರ ತೋಟದ ಮನೆಗೆ ಲಗ್ಗೆ ಇಟ್ಟಿರುವ ಈ ಚಿರತೆ ಇಲ್ಲಿಯೇ ಅವಿತುಕೊಂಡಿದೆ. ಮನೆಯಲ್ಲಿ ಮೇಕೆಗಳು ಸಹ ಇವೆ. ಚಿರತೆ ನುಗ್ಗಿದ್ದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ತಿಳಿದ ಗ್ರಾಮಸ್ಥರು ತಕ್ಷಣ ಮನೆಯ ಬಾಗಿಲುಗಳನ್ನು ಮುಚ್ಚಿ ಚಿರತೆಯನ್ನು ಕೂಡಿ ಹಾಕಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ. 

ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಸಾಮೂಹಿಕ ರಜೆ ಹಾಕಿ ಬಿಬಿಎಂಪಿ ಸಿಬ್ಬಂದಿ ಮುಷ್ಕರ

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.