ಗಂಗಾವತಿಯಲ್ಲಿ ಚಿರತೆ ಮರಿ.. ಸಿದ್ದಾಪುರದಲ್ಲಿ ಕರಡಿ ಪ್ರತ್ಯಕ್ಷ - Bear found near Siddapur

🎬 Watch Now: Feature Video

thumbnail

By

Published : Jun 11, 2023, 10:09 PM IST

ಗಂಗಾವತಿ (ಕೊಪ್ಪಳ): ಇತ್ತೀಚಿನ ದಿನಗಳಲ್ಲಿ ಗಂಗಾವತಿ ಸುತ್ತಲಿನ ಪ್ರದೇಶದಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿದೆ. ಗಂಗಾವತಿ ನಗರದಲ್ಲಿ ಚಿರತೆ ಮರಿಯೊಂದು ಕಾಣಿಸಿಕೊಂಡರೆ, ಶ್ರೀರಾಮನಗರ-ಸಿದ್ದಾಪುರ ಮಧ್ಯೆ ಕರಡಿಯೊಂದು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿದೆ. 

ಗಂಗಾವತಿ ನಗರದ ಕೊಪ್ಪಳ ರಸ್ತೆಯ ಇಲಾಹಿ ಕಾಲೋನಿಯಲ್ಲಿ ಶನಿವಾರ ರಾತ್ರಿ ಚಿರತೆ ಮರಿಯೊಂದು ಓಡಿ ಬರುತ್ತಿರುವ ದೃಶ್ಯ ಗುತ್ತಿಗೆದಾರ ಟಿ. ಭಾಷಾಸಾಬ ಎಂಬುವರ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಲಾಹಿ ಕಾಲೋನಿಯ ಜನವಸತಿ ಪ್ರದೇಶದ ರೈಲ್ವೆ ಹಳಿಯ ಭಾಗದಿಂದ ಚಿರತೆ ಮರಿಯೊಂದು ಓಡಿ ಬರುತ್ತಿರುವ ದೃಶ್ಯ ಕಂಡುಬಂದಿದೆ. ಬಳಿಕ ಚಿರತೆ ಮರಿ ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಇನ್ನು, ಚಿರತೆ ಮರಿಯೊಂದು ಸಿದ್ಧಿಕೇರಿಯ ಬೆಟ್ಟದ ಕಡೆ ಓಡಿ ಹೋಗುತ್ತಿರುವುದನ್ನು ನೋಡಿರುವುದಾಗಿ ಸ್ಥಳೀಯ ನಿವಾಸಿ ಗವಿಸಿದ್ದಪ್ಪ ತಳವಾರ ಎಂಬುವರ ಹೇಳಿದ್ದಾರೆ.

ಬೈಕ್​ ಸವಾರ ಮೇಲೆ ಕರಡಿ ದಾಳಿಗೆ ಯತ್ನ: ಕರಡಿಯೊಂದು ಬೈಕ್ ಸವಾರನ ಮೇಲೆ ದಾಳಿಗೆ ಯತ್ನಿಸಿರುವ ಘಟನೆ ಶ್ರೀರಾಮನಗರ-ಸಿದ್ದಾಪುರ ಮಾರ್ಗಮಧ್ಯೆ ಭಾನುವಾರ ಮಧ್ಯಾಹ್ನ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರ ಕರಡಿ ದಾಳಿಯಿಂದ ಪಾರಾಗಿದ್ದಾನೆ. ರಸ್ತೆ ಬದಿಯ ಜಮೀನಿನಿಂದ ಏಕಾಏಕಿ ರಸ್ತೆ ಆಗಮಿಸಿದ ಕರಡಿಯು ಬೈಕ್​ ಸವಾರನ ಮೇಲೆ ದಾಳಿ ನಡೆಸಲು ಯತ್ನಿಸಿದೆ.

ಇದನ್ನೂ ಓದಿ :Kolar crime news.. ಬೈಕ್​ನಲ್ಲಿರಿಸಿದ್ದ ಹಣ ಎಗರಿಸಿ ಪರಾರಿಯಾದ ಖದೀಮರು - ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.