ನಾಯಿ ಹುಡುಕಿಕೊಂಡು ಮನೆ ಬಾಗಿಲಿಗೆ ಬಂದ ಚಿರತೆ: ಶಿರಸಿಯ ವಿಡಿಯೋ - ‘ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/29-06-2023/640-480-18875870-thumbnail-16x9-mh.jpg)
ಶಿರಸಿ (ಉತ್ತರ ಕನ್ನಡ) : ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಶಿರಸಿ ತಾಲೂಕಿನ ತಲ್ಲಿನಮನೆಯಲ್ಲಿ ಚಿರತೆಯೊಂದು ನಾಯಿಯನ್ನು ಕಚ್ಚಿಕೊಂಡು ಹೋಗಿತ್ತು. ಇದಾದ ನಂತರವೂ ಅದೇ ಜಾಗಕ್ಕೆ ಬಂದ ಚಿರತೆ ಏನೂ ಸಿಗದೇ ಮರಳಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಲೇಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ತಲ್ಲಿನಮನೆಯ ರಾಮಕೃಷ್ಣ ಹೆಗಡೆ ಎಂಬವರ ಮನೆಯಲ್ಲಿ ಘಟನೆ ನಡೆದಿದೆ.
ಮನೆ ಬಾಗಿಲಿನಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಬಂದು ಎತ್ತಿಕೊಂಡು ಹೋಗಿತ್ತು. ಇದಾದ ಕೆಲವೇ ದಿನಗಳ ಬಳಿಕ ಮತ್ತೆ ಆಹಾರ ಅರಸಿ ಬಂದಿತ್ತು. ಆದರೆ ನಾಯಿ ಸಿಗಲಿಲ್ಲ. ಮನೆ ಬಾಗಿಲಿನಲ್ಲಿ ಅತ್ತಿತ್ತ ಹುಡುಕಾಟ ನಡೆಸಿ, ನಿರಾಸೆಯಿಂದ ಹೋಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ಘಟನೆ ಮನೆಯವರೂ ಸೇರಿದಂತೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಅದೇ ದಾರಿಯಲ್ಲಿ ಶಾಲಾ ಮಕ್ಕಳು ಓಡಾಡುತ್ತಿದ್ದಾರೆ. ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : Leopard in Tumkur: ಒಂದೇ ಕಡೆ ಏಕಾಏಕಿ ಮೂರು ಚಿರತೆಗಳು ಪ್ರತ್ಯಕ್ಷ.. ಬೆಚ್ಚಿ ಬಿದ್ದ ತುಮಕೂರು ಮಂದಿ