ಮಧುರೈನ ಮೀನಾಕ್ಷಿಯ ದರ್ಶನ ಪಡೆದ ಅಪಾರ ಸಂಖ್ಯೆಯ ಭಕ್ತರು: ವಿಡಿಯೋ - ಮಧುರೈನ ಮೀನಾಕ್ಷಿಯ ದರ್ಶನ
🎬 Watch Now: Feature Video
ತಮಿಳುನಾಡಿನ ಮಧುರೈನಲ್ಲಿರುವ ಅರುಲ್ಮಿಗು ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ‘ಚಿತ್ತಿರೈ’ ಉತ್ಸವದ 11 ನೇ ದಿನದಂದು ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದರು.
ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ದೇವಸ್ಥಾನ ಪ್ರವಾಸಿ ತಾಣಗಳಲ್ಲಿ ಅದ್ಭುತವಾಗಿದೆ. ಅಲ್ಲದೇ, ಇದು ವಾಸ್ತುಶಿಲ್ಪದ ಅತ್ಯಂತ ಸುಂದರವಾದ ತಾಣವೂ ಆಗಿದೆ. ಭಗವಾನ್ ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾಗಿರುವ ಈ ದೇವಾಲಯವನ್ನು ಒಟ್ಟು 14 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ.
ಈ ದೇವಾಲಯ ಸುಮಾರು 10 ಗೋಪುರಗಳನ್ನು ಹೊಂದಿದೆ. ಇಲ್ಲಿನ 985 ಕಂಬಗಳನ್ನು ದ್ರಾವಿಡ ಶಿಲ್ಪಕಲೆಯ ಶೈಲಿಯಲ್ಲಿ ಕೆತ್ತನೆ ಮಾಡಲಾಗಿದೆ. ಶ್ರೀ ಮೀನಾಕ್ಷಿ ಅಮ್ಮನ ದೇವಸ್ಥಾನದಲ್ಲಿ ಅದ್ಭುತವಾದ ವಿವಾಹ ಮಂಟಪವನ್ನು ಕೂಡ ಕಾಣಬಹುದಾಗಿದೆ. ಹಾಗೆಯೇ 10 ಇತಿಹಾಸದ ಕುರುಹುಗಳಿರುವ ವಿಶೇಷತೆಗಳನ್ನು ಕೂಡಾ ಈ ದೇವಸ್ಥಾನದ ಆವರಣದಲ್ಲಿ ನಾವು ಕಾಣಬಹುದು.
ಮೀನಾಕ್ಷಿ ಅಮ್ಮನವರ ದೇವಸ್ಥಾನವು ತಮಿಳುನಾಡಿನ ಮಧುರೈ ನಗರದಲ್ಲಿದೆ. ಇದು ಹಿಂದೂ ದೇವಾಲಯವಾಗಿದ್ದು, ಅಮ್ಮನವರ ದರ್ಶನ ಪಡೆಯಲು ದೇಶದ ವಿವಿಧ ಭಾಗಗಳಿಂದ ಚಿತ್ತಿರೈ ಉತ್ಸವದಂದು ಭಕ್ತರ ದಂಡೇ ಹರಿದುಬರುತ್ತದೆ.
ಇದನ್ನೂ ಓದಿ: ಐತಿಹಾಸಿಕ ಶ್ರೀ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ!