ಮಹಿಳಾ ಮೀಸಲಾತಿ ಮಸೂದೆ: ಮಾಜಿ ಭುವನ ಸುಂದರಿ ಲಾರಾ ದತ್ತಾ ಹೇಳಿದ್ದೇನು? ವಿಡಿಯೋ - ಮಹಿಳಾ ಮೀಸಲಾತಿ ಮಸೂದೆ
🎬 Watch Now: Feature Video
Published : Sep 26, 2023, 11:18 AM IST
|Updated : Sep 26, 2023, 12:23 PM IST
ಮುಂಬೈ: ಮಹಿಳಾ ಮೀಸಲಾತಿ ಮಸೂದೆ ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಬಹುತೇಕ ಮಹಿಳೆಯರು ಕೇಂದ್ರ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಬಾಲಿವುಡ್‌ನ ಹೆಸರಾಂತ ನಟಿ ಹಾಗು ಮಾಜಿ ಭುವನ ಸುಂದರಿ ಲಾರಾ ದತ್ತಾ, ಮಹಿಳಾ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದರು. "ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಭವಿಷ್ಯ ಇಲ್ಲಿಂದಲೇ ಉಜ್ವಲವಾಗಲಿದೆ ಅಂತ ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಇನ್ನು, ನೂತನ ಸಂಸತ್ ಭವನಕ್ಕೆ ಇತ್ತೀಚೆಗೆ ಹೆಸರಾಂತ ನಟಿಯರು ಭೇಟಿ ಕೊಟ್ಟಿದ್ದರು. ಜೈಲರ್ ಸಿನಿಮಾ ನಟಿ ತಮನ್ನಾ ಕೂಡ ಆಗಮಿಸಿದ್ದರು. ಅವರು ಮಸೂದೆಯ ಕುರಿತು ಮಾತನಾಡುತ್ತಾ, "ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರವು ನಮ್ಮ ದೇಶಕ್ಕೆ ಐತಿಹಾಸಿಕ ಸಂದರ್ಭ. ಇದು ನಮಗೆ ಪ್ರಮುಖವಾಗಿತ್ತು. ದೇಶ ಸೂಪರ್ ಪವರ್ ಆಗಲು ಇದು ಮೊದಲ ಹೆಜ್ಜೆ" ಎಂದಿದ್ದರು. ನಟಿ ದಿವ್ಯಾ ದತ್ತಾ ಮಾತನಾಡುತ್ತಾ, "ನಾವು ನೂತನ ಸಂಸತ್ ಭವನಕ್ಕೆ ಬಂದಿರುವುದು ನಮ್ಮ ಅದೃಷ್ಟ. ಇದೊಂದು ಐತಿಹಾಸಿಕ ದಿನ. ಇದರ ಭಾಗವಾಗಿರುವುದಕ್ಕೆ ಬಹಳ ಸಂತೋಷವಾಗಿದೆ. ಎಲ್ಲಾ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ. ಇದು ನಮಗೆ ಉತ್ತೇಜನ ನೀಡುತ್ತದೆ" ಎಂದು ಸಂತಸಪಟ್ಟಿದ್ದರು.
ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ಪ್ರಚಾರಕ್ಕಾಗಿ ನೂತನ ಸಂಸತ್ ಭವನಕ್ಕೆ ನಟಿಯರಿಗೆ ಆಹ್ವಾನ: ಎನ್ಸಿಪಿ ಟೀಕೆ