ಕುಟುಂಬಸಮೇತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್: ವಿಡಿಯೋ - ತಿರುಪತಿ ಬಾಲಾಜಿ ದೇವಸ್ಥಾನ
🎬 Watch Now: Feature Video
Published : Dec 10, 2023, 11:06 AM IST
|Updated : Dec 10, 2023, 11:15 AM IST
ತಿರುಪತಿ(ಆಂಧ್ರಪ್ರದೇಶ): ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಶನಿವಾರ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಕುಟುಂಬ ಸದಸ್ಯರೊಂದಿಗೆ ಸ್ವಾಮಿಯ ಸುಪ್ರಭಾತ ಸೇವೆಯಲ್ಲಿ ಅವರು ಪಾಲ್ಗೊಂಡರು. ಟಿಟಿಡಿ ದೇವಸ್ಥಾನದ ಅಧಿಕಾರಿಗಳು ಸ್ವಾಗತಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ಬಳಿಕ ಲಾಲು ಪ್ರಸಾದ್ ಯಾದವ್ ಅವರು ಗರ್ಭಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಆರ್‌ಜೆಡಿ ಮುಖ್ಯಸ್ಥರು ತಮ್ಮ ಪತ್ನಿ ರಾಬ್ರಿ ದೇವಿ ಮತ್ತು ಮಕ್ಕಳಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ದೇವಸ್ಥಾನದ ಅಧಿಕಾರಿಗಳು ಹಿರಿಯ ರಾಜಕಾರಣಿಗೆ ಸ್ವಾಮಿಯ ತೀರ್ಥ ಪ್ರಸಾದಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಾಲು ಪ್ರಸಾದ್ ಪುತ್ರ ಹಾಗೂ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, "ತಿರುಮಲ ಸ್ವಾಮಿಯನ್ನು ನೋಡಿ ತುಂಬಾ ಸಂತೋಷವಾಯಿತು, ದೇವಸ್ಥಾನದ ಆಡಳಿತ ಮಂಡಳಿಯವರು ವಿಶೇಷ ವ್ಯವಸ್ಥೆ ಮಾಡಿದ್ದರಿಂದ ಪೂಜೆ ಯಶಸ್ವಿಯಾಗಿ ನೆರವೇರಿತು. ಕುಟುಂಬಸ್ಥರೊಂದಿಗೆ ಭಕ್ತಿಯಿಂದ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡೆವು" ಎಂದರು.
ಇದನ್ನೂ ಓದಿ : Tirumala Temple: ತಿರುಮಲ ಪಾದಚಾರಿ ಮಾರ್ಗದಲ್ಲಿ ಮಧ್ಯಾಹ್ನ 2 ಗಂಟೆ ನಂತರ ಮಕ್ಕಳಿಗೆ ಪ್ರವೇಶವಿಲ್ಲ