ಚಾಮರಾಜನಗರದ ಆಸ್ಪತ್ರೆಯಲ್ಲಿ ಫ್ಯಾನ್ ಇಲ್ಲ; ಖರೀದಿಸಿ ತರುವ ರೋಗಿಗಳು, ಸಂಬಂಧಿಕರು! - ಚಾಮರಾಜನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ
🎬 Watch Now: Feature Video
ಚಾಮರಾಜನಗರ: ಇಲ್ಲಿನ ಆಸ್ಪತ್ರೆಯಲ್ಲಿ ಫ್ಯಾನ್ಗಳು ತಿರುಗುತ್ತಿಲ್ಲ. ರೋಗಿಗಳು, ಅವರ ಸಂಬಂಧಿಕರು ಬಿಸಿಲ ತಾಪ ತಡೆಯಲಾರದೇ ಟೇಬಲ್ ಫ್ಯಾನ್ ಜೊತೆಗೆ ಆಸ್ಪತ್ರೆಗೆ ಬರುತ್ತಿದ್ದಾರೆ. ಇದು ಚಾಮರಾಜನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪರಿಸ್ಥಿತಿ.
ಗರ್ಭಿಣಿಯರು ಹಾಗೂ ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ಬಿಸಿಲ ಝಳಕ್ಕೆ ಹೈರಾಣಾಗುತ್ತಿದ್ದಾರೆ. ಹೀಗಾಗಿ, ಸ್ವಂತ ಹಣದಿಂದ ಫ್ಯಾನ್ಗಳನ್ನು ಖರೀದಿಸಿ ಆಸ್ಪತ್ರೆಯಲ್ಲಿ ಬಳಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅಳವಡಿಸಿರುವ ಯಾವ ಫ್ಯಾನ್ ಕೂಡಾ ಕಾರ್ಯ ನಿರ್ವಹಿಸುತ್ತಿಲ್ಲ. ವೈದ್ಯರು, ಸಿಬ್ಬಂದಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ರೋಗಿಗಳು, ಸಂಬಂಧಿಕರು ಹೇಳಿದ್ದಾರೆ.
ಈ ಆಸ್ಪತ್ರೆಯಲ್ಲಿ ದಾಖಲಾಗಿರುವ ಓರ್ವ ರೋಗಿಯ ಸಂಬಂಧಿಕರಾದ ಗುರುಮೂರ್ತಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಿದು. ಇಲ್ಲಿ ರೋಗಿಗಳಿಗೆ ಬೇಕಾದ ಅನುಕೂಲಕತೆಗಳಿಲ್ಲ. ಎಲ್ಲ ಅಗತ್ಯಗಳಿಗೆ ನಾವು ಸ್ವಂತ ಹಣ ಪಾವತಿಸಿ ಖರೀದಿಸಬೇಕು. ಫ್ಯಾನಿನ ವ್ಯವಸ್ಥೆಯೂ ಇಲ್ಲ. ರೋಗಿಗಳೇ ಅಥವಾ ಅವರ ಸಂಬಂಧಿಕರು ಹೊರಗಿನಿಂದ ಫ್ಯಾನ್ ತಂದು ಆಸ್ಪತ್ರೆಯಲ್ಲಿ ಮಲಗುವ ಸ್ಥಿತಿ ಇದೆ ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಕೆಆರ್ ಸರ್ಕಲ್ ಅಂಡರ್ ಪಾಸ್‌ನಲ್ಲಿ ಯುವತಿ ಸಾವು: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ