Congress guaranty: ಶಕ್ತಿ ಯೋಜನೆಯಡಿ ಚಾಮರಾಜನಗರದಲ್ಲಿ ನಿತ್ಯ 80 ಸಾವಿರ ಮಹಿಳೆಯರ ಓಡಾಟ ನಿರೀಕ್ಷೆ!

🎬 Watch Now: Feature Video

thumbnail

ಚಾಮರಾಜನಗರ: ಭಾನುವಾರದಿಂದ ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿಯಾಗಿದ್ದು, ಚಾಮರಾಜನಗರದಲ್ಲಿ ನಿತ್ಯ 80 ಸಾವಿರ ಮಂದಿ ಇದರ ಅನುಕೂಲ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ. ಕೆಎಸ್​​ಆರ್​ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈ ಸಂಬಂಧ ಮಾತನಾಡಿದ್ದು, ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿದೆ. ನಿತ್ಯ ಜಿಲ್ಲೆಯಲ್ಲಿ 480 ಬಸ್​ಗಳು ಸಂಚರಿಸಲಿದ್ದು, ಸರಾಸರಿ 1.70 ಲಕ್ಷ ಪ್ರಯಾಣಿಕರು ಓಡಾಟ ನಡೆಸುತ್ತಾರೆ.

ಇದರಲ್ಲಿ 75-80 ಸಾವಿರ ಮಂದಿ ನಿತ್ಯ ಶಕ್ತಿ ಯೋಜನೆಯ ಅನುಕೂಲ ಪಡೆಯಲಿದ್ದಾರೆ.  ಹೊರರಾಜ್ಯಕ್ಕೆ ಪ್ರಯಾಣ ಬೆಳೆಸುವವರು ಗಡಿ ತನಕ ಉಚಿತವಾಗಿ ಪ್ರಯಾಣಿಸಿ ಅದಾದ ಬಳಿಕ ಟಿಕೆಟ್ ಪಡೆಯಬೇಕು. ಜಾತ್ರಾ ವಿಶೇಷ ಬಸ್​ಗಳಲ್ಲೂ ಶಕ್ತಿ ಯೋಜನೆ ಅನ್ವಯವಾಗಲಿದ್ದು, ಖಾಸಗಿ ಬಸ್​ ಅನ್ನು ಅವಲಂಭಿಸುವವರು ಈಗ ಸಾರಿಗೆ ಸಂಸ್ಥೆ ಬಸ್​ಗಳಿಗೆ ಶಿಫ್ಟ್ ಆಗಲಿದ್ದಾರೆ. ಅಲ್ಲದೇ ಓಲ್ವೋ, ಸ್ಲೀಪರ್​, ಸೆಮಿಸ್ಲೀಪರ್ ​ನಂತಹ ಬಸ್​ಗಳಗೆ ಉಚಿತ ಪ್ರಯಾಣ ಅನ್ವಯಿಸುವುದಿಲ್ಲ. ಬಸ್​ನಲ್ಲಿ ಉಚಿತ ಪ್ರಯಾಣ ಮಾಡಲು ಇಚ್ಛಿಸುವ ಮಹಿಳೆಯರು, ಸರಿಯಾದ ಗುರುತಿನ ಚೀಟಿಯನ್ನು ಜೊತೆಯಲ್ಲೆ ಇರಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದರು.  

ಇದನ್ನೂ ಓದಿ: Congress Guarantee Scheme: ಮಹಿಳೆಯರಿಗೆ ಬಹುನಿರೀಕ್ಷಿತ ಉಚಿತ ಬಸ್​ ಪ್ರಯಾಣ .. ಇಲ್ಲಿದೆ ಶಕ್ತಿ ಯೋಜನೆಯ ಸಮಗ್ರ ಚಿತ್ರಣ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.