KSRTC ಬಸ್​​​ಗೆ ಬೆಂಕಿ; ತಪ್ಪಿದ ಭಾರಿ ಅನಾಹುತ

🎬 Watch Now: Feature Video

thumbnail

ಚಿಕ್ಕೋಡಿ: ಚಲಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್​​ನಲ್ಲಿ ಇದ್ದಕ್ಕಿದ್ದಂತೆ ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಈ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪೂರ‌ ಗ್ರಾಮದ ಬಳಿ ಶನಿವಾರ ನಡೆದಿದೆ. ಇಂದು ಸಂಜೆ ಬೆಳಗಾವಿ ನಗರದಿಂದ ಹುಕ್ಕೇರಿ ಪಟ್ಟಣಕ್ಕೆ ಬಸ್ ಆಗಮಿಸುತ್ತಿತ್ತು. ಆದರೆ, ಮಾರ್ಗ ಮಧ್ಯ ಬಸ್​ನ ಇಂಜಿನ್ ಭಾಗದಲ್ಲಿ ಹಠಾತ್ತನೆ​ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ 20ಕ್ಕೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಯಾಣಿಕರು ಕೆಳಗೆ ಇಳಿಯುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಸಂಪೂರ್ಣವಾಗಿ ಬಸ್​ ಆವರಿಸಿಕೊಂಡಿದ್ದು, ಬಸ್ ಸುಟ್ಟು ಕರಕಲಾಗಿದೆ. ಈ ಅವಘಡದಿಂದ ಪುಣೆ ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ ಬಸ್​ ಮಾತ್ರ ಸುಟ್ಟು ಕರಲಾಗಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. 

ಇದನ್ನೂ ಓದಿ: ಖಾನಾಪುರ ಕೆನರಾ ಬ್ಯಾಂಕ್​ಗೆ ಬೆಂಕಿ: ಕಡತ, ಪಿಠೋಪಕರಣಗಳು ಸುಟ್ಟು ಭಸ್ಮ

Last Updated : Nov 18, 2023, 8:17 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.