ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಮುಂದೆ ಸಾಗಿದ ಚಾಲಕ.. ನಮ್ಮ ಮೇಲೆ ಬಸ್ ಹರಿಸುವ ಯತ್ನ ಎಂದು ಮಹಿಳೆಯರ ಆಕ್ರೋಶ! - ಕೊರಟಗೆರೆ ತಹಶೀಲ್ದಾರ್ ಮುನಿಶಾಮ ರೆಡ್ಡಿ
🎬 Watch Now: Feature Video
ತುಮಕೂರು: ರಾಜ್ಯದ ಮಹಿಳೆಯರಿಗೆ ಸರ್ಕಾರ ಶಕ್ತಿ ಯೋಜನೆಯಡಿ ಸರ್ಕಾರ ಉಚಿತ ಬಸ್ ಪ್ರಯಾಣ ಒದಗಿಸಿದೆ. ಆದರೆ, ತುಮಕೂರಿನಲ್ಲಿ ಕೆಎಸ್ಆರ್ಟಿಸಿ ಬಸ್ನ ಚಾಲಕ ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಅವರ ಮೇಲೆಯೇ ಬಸ್ ಹರಿಸಲು ಮುಂದಾದ ಘಟನೆ ಜಿಲ್ಲೆಯ, ಕೊರಟಗೆರೆ ತಾಲೂಕಿನ ನಾಗೇನಹಳ್ಳಿ ಕ್ರಾಸ್ ಬಳಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಕೊಳ್ಳೇಗಾಲದಿಂದ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಲಕ್ಷ್ಮೀ ದರ್ಶನಕ್ಕೆ ಬಂದಿದ್ದ ಮಹಿಳೆಯರು ಹಾಗೂ ಮಕ್ಕಳು, ದೇವರ ದರ್ಶನ ಮುಗಿಸಿ ವಾಪಸ್ ಕೊಳ್ಳೆಗಾಲದತ್ತ ತೆರಳಲು ಬಸ್ಗಾಗಿ ಕಾಯುತ್ತುದ್ದರು. ಆದರೆ 2 ತಾಸು ಕಾದರೂ ಯಾವುದೇ ಬಸ್ ನಿಲ್ಲಿಸಿರಲಿಲ್ಲ. ಇದರಿಂದ ಸರ್ಕಾರಿ ಬಸ್ ಅನ್ನು ನಿಲ್ಲಿಸಲು ಜನರು ಮುಂದಾಗಿದ್ದಾರೆ.
ಮಹಿಳೆಯರು ಬಸ್ ನಿಲ್ಲಿಸುವಂತೆ ಕೈ ಮಾಡಿದರೂ ಬಸ್ ಚಾಲಕ ಮಾತ್ರ ನಿಲ್ಲಿಸದೇ ಮುಂದೆ ಸಾಗಿದ್ದಾನೆ. ಚಾಲಕನ ಈ ವರ್ತನೆಗೆ ಮಹಿಳಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಹಿಳೆಯರು ಬಸ್ಗೆ ಅಡ್ಡಲಾಗಿ ನಿಂತು ಬಸ್ ತಡೆಯಲು ಹೋಗಿದ್ದಾರೆ. ಈ ವೇಳೆ ಚಾಲಕ ಸ್ಟಾಪ್ ಮಾಡದೇ ಬಸ್ ಚಾಲನೆ ಮಾಡಿದ್ದ. ವಿಷಯ ತಿಳಿದು ಸ್ಥಳಕ್ಕೆ ಬಂದ ಕೊರಟಗೆರೆ ತಹಶೀಲ್ದಾರ್ ಮುನಿಶಾಮ ರೆಡ್ಡಿ, ಮಹಿಳೆಯರ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: Viral video: ಕುಡಿದ ಮತ್ತಿನಲ್ಲಿ ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿದ ಯುವಕ - ಯುವತಿಯರು