ಪುತ್ತೂರಿನಲ್ಲಿ ಕೃಷ್ಣಲೋಕ ಬೆಳ್ಳಿ ಹಬ್ಬದ ಸಂಭ್ರಮ - ಶ್ರೀಕೃಷ್ಣ, ರಾಧೆಯರ ವಿಜೃಂಭಣೆಯ ಶೋಭಾಯಾತ್ರೆ - Pediatrician Dr Manjunath Shetty
🎬 Watch Now: Feature Video
Published : Sep 6, 2023, 6:05 PM IST
ಪುತ್ತೂರು : ವಿವೇಕಾನಂದ ಶಿಶು ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆಯುವ ಶ್ರೀಕೃಷ್ಣ ಲೋಕ ಕಾರ್ಯಕ್ರಮದ ಬೆಳ್ಳಿ ಹಬ್ಬದ ಸಂಭ್ರಮಗಳಿಗೆ ಚಾಲನೆ ದೊರೆತಿದ್ದು, ಶ್ರೀ ಕೃಷ್ಣ, ರಾಧೆಯ ವೇಷಧಾರಿ ಪುಟಾಣಿಗಳ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಬೆಳಗ್ಗೆ ಶಿಶು ಮಂದಿರದ ಆವರಣದಲ್ಲಿ ಭಜನೆ, ಬಾಲಕೃಷ್ಣನ ತೊಟ್ಟಿಲ ಸಂಭ್ರಮ, ಮಗುವಿನ ತಾಯಿಗೆ ಬಾಗಿನ ಸಮರ್ಪಣೆ ಬಳಿಕ ನಡೆದ ಶೋಭಾಯಾತ್ರೆಗೆ ಮಕ್ಕಳ ತಜ್ಞ ಡಾ. ಮಂಜುನಾಥ ಶೆಟ್ಟಿ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ತಾ.ಪಂ ಮುಂಭಾಗದಿಂದ ಹೊರಟ ಶೋಭಾಯಾತ್ರೆಯು ಕೋರ್ಟ್ ರಸ್ತೆ, ಮುಖ್ಯ ರಸ್ತೆ, ಪ್ರಧಾನ ಅಂಚೆ ಕಚೇರಿ ಬಳಿಯಿಂದಾಗಿ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾಪನಗೊಂಡಿತು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಧ್ವಜ ಹಸ್ತಾಂತರಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ , ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ದಾಮೋದರ ಪಾಟಾಳಿ, ಕಾರ್ಯದರ್ಶಿ ಸಂತೋಷ್ ರೈ, ಗೌರವಾಧ್ಯಕ್ಷೆ ರಾಜೀ ಬಲರಾಮ ಆಚಾರ್ಯ, ಡಾ. ಸುಧಾ ಎಸ್ ರಾವ್, ಡಾ. ಗೌರಿ ಪೈ, ಶಿಶು ಮಂದಿರದ ಅಧ್ಯಕ್ಷ ರಾಜಗೋಪಾಲ ಭಟ್ ಸೇರಿದಂತೆ ಹಲವು ಮಂದಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.