ಕೆಆರ್ ಪುರಂ ಕಾಂಗ್ರೆಸ್ ಭದ್ರಕೋಟೆ: ಅಭ್ಯರ್ಥಿ ಡಿ ಕೆ ಮೋಹನ್ - ಅಭ್ಯರ್ಥಿ ಡಿ ಕೆ ಮೋಹನ್ ಮತದಾರರಲ್ಲಿ ವಿನಂತಿ

🎬 Watch Now: Feature Video

thumbnail

By

Published : May 2, 2023, 5:17 PM IST

ಬೆಂಗಳೂರು : ಸತತ ಮೂರು ಬಾರಿ ಗೆಲ್ಲಿಸಿದರೂ ಕೆಲಸ ಮಾಡದ ಬಿಜೆಪಿ ಅಭ್ಯರ್ಥಿ ಇದೀಗ ಮತ್ತೆ ಮತದಾರರ ಮುಂದೆ ನಿಂತಿರುವುದು ನಾಚಿಕೆಗೇಡು. ಕ್ಷೇತ್ರದಲ್ಲಿ ಮೂಲಸೌರ್ಕಯ ಸೇರಿದಂತೆ ನಾನಾ ಸಮಸ್ಯೆಗಳಿದ್ದು, ಇದನ್ನು ಪರಿಹರಿಸಬೇಕಾದರೆ ಕಾಂಗ್ರೆಸ್​ಗೆ ಮತ ನೀಡಿ ಎಂದು ಕೆ ಆರ್ ಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಿ ಕೆ ಮೋಹನ್ ಮತದಾರರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. 

ಮತದಾನ ದಿನ ಸಮೀಪವಾಗುತ್ತಿದ್ದಂತೆ ಪ್ರಚಾರ ಕಾರ್ಯ ಚುರುಕುಗೊಂಡಿದೆ‌. ರಣ ಬಿಸಿಲು ನಡುವೆಯೂ ಅಭ್ಯರ್ಥಿಗಳು ತಮ್ಮ ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಗೆಲುವು ತಮ್ಮದೇ ಎಂಬ ವಿಶ್ವಾಸದಲ್ಲಿರುವ ಅಭ್ಯರ್ಥಿಗಳು ಆತ್ಮವಿಶ್ವಾಸದಲ್ಲಿದ್ದಾರೆ. ಕ್ಷೇತ್ರದ ಎ ನಾರಾಯಪುರ, ಬಿ. ನಾರಾಯಣಪುರ ಹಾಗೂ ಉದಯನಗರದಲ್ಲಿ ತೆರೆದ ವಾಹನದಲ್ಲಿ ಅಭ್ಯರ್ಥಿ ಡಿ ಕೆ ಮೋಹನ್ ಅವರು ಪ್ರಚಾರ ನಡೆಸಿದರು. 

ಈ ವೇಳೆ ಮಾತನಾಡಿದ ಅವರು, ಕೆ ಆರ್ ಪುರ ಕಾಂಗ್ರೆಸ್ ಭದ್ರಕೋಟೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಎ ಕೃಷ್ಣಪ್ಪ ಅವರು ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಕಾಯಕವೇ ನನಗೆ ಶ್ರೀರಕ್ಷೆಯಾಗಿದೆ‌. ಅಧಿಕಾರದಲ್ಲಿರುವಾಗ ಬಿಜೆಪಿ ಶಾಸಕ ಭೈರತಿ ಬಸವರಾಜ್ ಏನೂ ಕೆಲಸ ಮಾಡಿಲ್ಲ. ಕ್ಷೇತ್ರದಲ್ಲಿ ಮೂಲಸೌಕರ್ಯ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿವೆ. ಶಾಸಕರಾಗಿದ್ದಾಗ ಮಾಡದ ಅಭಿವೃದ್ಧಿ ಕೆಲಸ‌ ಈಗ ಮಾಡುತ್ತಾರಾ? ಎಂದು ಪ್ರಶ್ನಿಸಿದರು.

ನಾನು ಕ್ಷೇತ್ರದ ನಿವಾಸಿಯಾಗಿದ್ದು, ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷನಾಗಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಹೀಗಾಗಿ ಮತದಾರರು ತನ್ನನ್ನು ಗೆಲ್ಲಿಸಿದರೆ ರಸ್ತೆ, ಚರಂಡಿ ಇನ್ನಿತರ ಅಗತ್ಯ ಸೌಲಭ್ಯ ಒದಗಿಸಲು‌ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಡಾ ಕೆ ಜಯಕುಮಾರ್ ಸಹ ಪ್ರಚಾರ ನಡೆಸಿದರು.

ಇದನ್ನೂ ಓದಿ: ಜಿ ಪರಮೇಶ್ವರ್ ಗೆದ್ರೆ ನನಗಾಗುವಷ್ಟು ಸಂತೋಷ ಬೇರೆ ಯಾರಿಗೂ ಆಗಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.